alex Certify
ಕನ್ನಡ ದುನಿಯಾ       Mobile App
       

Kannada Duniya

ಅವಿವಾಹಿತ ಪುರುಷರಿಗೆ ವಿವಾಹಿತ ಮಹಿಳೆಯರು ಯಾಕೆ ಇಷ್ಟವಾಗ್ತಾರೆ ಗೊತ್ತಾ?

ಕೆಲ ಅವಿವಾಹಿತ ಪುರುಷರು ವಿವಾಹಿತ ಮಹಿಳೆ ಜೊತೆ ಡೇಟಿಂಗ್ ಇಷ್ಟಪಡ್ತಾರೆ. ಸಮೀಕ್ಷೆ ಕೂಡ ಇದನ್ನೇ ಹೇಳಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಪುರುಷರು ವಿವಾಹಿತ ಮಹಿಳೆ ಜೊತೆ ಡೇಟಿಂಗ್ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ಅವಿವಾಹಿತ ಪುರುಷರು ವಿವಾಹಿತ ಮಹಿಳೆಯರಿಗೆ ಆಕರ್ಷಕರಾಗೋದು ಯಾಕೆ ಗೊತ್ತಾ?

ವಿವಾಹಿತ ಮಹಿಳೆಯರು ಅವಿವಾಹಿತ ಮಹಿಳೆಯರಿಗಿಂತ ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತಾರೆ. ಇದ್ರಿಂದಾಗಿ ಅವರು ಹೆಚ್ಚು ಆಕರ್ಷಿತರಾಗಿ ಕಾಣ್ತಾರೆ.

ವಿವಾಹಿತ ಮಹಿಳೆಯರು ತಮ್ಮ ಸ್ಕಿನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ವಯಸ್ಸಾಗ್ತಿದ್ದಂತೆ ದೇಹದಲ್ಲಾಗುವ ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುತ್ತಾರೆ.

ಸೆಲೆಬ್ರಿಟಿಗಳನ್ನು ಹೊರತುಪಡಿಸಿದ್ರೆ ಸಾಮಾನ್ಯ ವಿವಾಹಿತ ಮಹಿಳೆಯರು ಹೆಚ್ಚು ಮೇಕಪ್ ಮಾಡಿಕೊಂಡು ತಮ್ಮ ಸೌಂದರ್ಯ ಪ್ರದರ್ಶನಕ್ಕಿಳಿಯುವುದಿಲ್ಲ. ತಮ್ಮನ್ನ ತಾವು ನಿರ್ವಹಿಸಬಲ್ಲವರಾಗಿರುತ್ತಾರೆ.

ವಿವಾಹಿತ ಮಹಿಳೆಯರು ಹೆಚ್ಚು ನೇರವಾಗಿ ಮಾತನಾಡುತ್ತಾರೆ. ತಮಗನ್ನಿಸಿದ್ದನ್ನು ನೇರವಾಗಿ ಬೇರೆಯವರ ಮುಂದೆ ಹೇಳಿ ಅವ್ರ ಪ್ರತಿಕ್ರಿಯೆಯನ್ನು ಸಹಜವಾಗಿ ಸ್ವೀಕರಿಸುತ್ತಾರೆ.

ವಿವಾಹಿತ ಮಹಿಳೆಯರು ಹೆಚ್ಚು ಕಾಳಜಿ ವಹಿಸೋದನ್ನು ಕಲಿಯುತ್ತಾರೆ. ಬೇರೆಯವರ ಕಾಳಜಿ ಜೊತೆ ತಮ್ಮ ಆರೈಕೆಯನ್ನೂ ಮಾಡಿಕೊಳ್ಳುವುದ್ರಿಂದ ಅವರು ಮತ್ತಷ್ಟು ಸುಂದರವಾಗಿ ಕಾಣುತ್ತಾರೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...