alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರು ಕೆಲಸ ಬಿಡಲು ಕಾರಣವೇನು..?

download (2)

ಇಂದು ಮಹಿಳಾ ದಿನಾಚರಣೆ. ಮಹಿಳೆಯರನ್ನು ಹಾಡಿ ಹೊಗಳಲಾಗ್ತಾ ಇದೆ. ಆದ್ರೆ ಮಹಿಳೆಗೆ ಸನ್ಮಾನ, ಆಕೆಯ ಕಾರ್ಯಕ್ಕೆ ಶ್ಲಾಘನೆ ಸಿಗೋದು ಮಹಿಳಾ ದಿನದಂದು ಮಾತ್ರ. ಮಹಿಳೆ ಈಗ ಎಲ್ಲ ಕ್ಷೇತ್ರಗಳಿಗೂ ಹೆಜ್ಜೆ ಇಟ್ಟಿದ್ದಾಳೆ. ಪುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ. ಮಹಿಳೆ ಎಷ್ಟು ಮುಂದೆ ಹೋದ್ರೂ ಪುರುಷರ ಶೋಷಣೆಯಿಂದ ಮಾತ್ರ ಆಕೆಗೆ ಮುಕ್ತಿ ಸಿಕ್ಕಿಲ್ಲ.

ಕೆಲಸಕ್ಕೆ ಹೋಗುವ ಮಹಿಳೆಯರು, ಅದರಲ್ಲೂ ಖಾಸಗಿ ವಲಯದಲ್ಲಿ ಉದ್ಯೋಗ ಮಾಡುವ ಮಹಿಳೆಯರು ಪದೇ ಪದೇ ಕೆಲಸ ಬದಲಾಯಿಸ್ತಿದ್ದಾರೆ. ಇಲ್ಲ ಕೆಲಸ ಬಿಟ್ಟು ಮನೆಯಲ್ಲಿರಲು ಇಷ್ಟ ಪಡ್ತಾರೆ. ಇದಕ್ಕೆ ಲಿಂಗ ಪಕ್ಷಪಾತ ಹಾಗೂ ಕಿರುಕುಳವೇ ಮುಖ್ಯ ಕಾರಣವಾಗಿದೆ. ಮಹಿಳಾ ದಿನಾಚರಣೆಗೂ ಮುನ್ನ ನಡೆಸಿದ ಸರ್ವೆಯೊಂದರಲ್ಲಿ ಈ ವಿಷಯ ಗೊತ್ತಾಗಿದೆ.

ಸಮೀಕ್ಷೆ ಪ್ರಕಾರ ಶೇಕಡಾ 40 ರಷ್ಟು ಮಹಿಳೆಯರು ತಮ್ಮ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವ ಹಿನ್ನೆಲೆಯಲ್ಲಿ ಕೆಲಸ ಬಿಡುತ್ತಿದ್ದಾರೆ. ಇನ್ನು ಲಿಂಗ ಪಕ್ಷಪಾತ, ಕಾರ್ಯಸ್ಥಳದಲ್ಲಿ ಶೋಷಣೆ ಹಾಗೂ ನಿಯಮಿತವಿಲ್ಲದ ಕೆಲಸದ ಸಮಯದಿಂದಾಗಿ ಅನೇಕ ಮಹಿಳೆಯರು ಉದ್ಯೋಗ ಬಿಡಲು ಕಾರಣವಾಗ್ತಿದೆ.

500 ಕ್ಕೂ ಹೆಚ್ಚು ವೃತ್ತಿಪರ ಮಹಿಳೆಯರನ್ನು ಸರ್ವೆ ಮಾಡಲಾಗಿದೆ. ಅದರಲ್ಲಿ ಶೇಕಡಾ 25 ರಷ್ಟು ಮಹಿಳೆಯರು, ಶೋಷಣೆ, ಕೆಲಸದ ಸಮಯ, ಪಕ್ಷಪಾತ, ವೇತನವೇ ಕೆಲಸ ಬಿಡಲು ಕಾರಣ ಎಂದಿದ್ದಾರೆ. 200 ಅಮ್ಮಂದಿರಲ್ಲಿ ಶೇಕಡಾ 80 ರಷ್ಟು ಮಂದಿ, ಕುಟುಂಬದ ಜೊತೆ ಸಮಯ ಕಳೆಯಲು ಸಾಧ್ಯವಾಗದ ಕಾರಣ ಕೆಲಸ ಬಿಡುತ್ತಿರುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...