alex Certify
ಕನ್ನಡ ದುನಿಯಾ       Mobile App
       

Kannada Duniya

ಕಮಲಾ- ಅಮಲಾ ಎಂಬ ತೋಳದ ಕೂಸುಗಳು

Wolfನಿಮಗೆ ‘ಜಂಗಲ್ ಬುಕ್’ ನ ಮೊಗ್ಲಿ ನೆನಪಿರಬಹುದು. ಅದರಲ್ಲಿ ಮೊಗ್ಲಿ ತೋಳಗಳ ಜೊತೆ ಕಾಡಿನಲ್ಲೇ ಬೆಳೆಯುತ್ತಾನೆ. ಇಂತಹ ಘಟನೆಗಳು ಜಗತ್ತಿನ ಹಲವೆಡೆ ನಡೆದಿದೆ. ಹುಟ್ಟಿನಿಂದಲೂ ಕಾಡಿನ ಪ್ರಾಣಿಗಳ ಜೊತೆ ಬೆಳೆದು ಇವರ ಆಚಾರ-ವಿಚಾರ, ಹಾವ-ಭಾವಗಳೆಲ್ಲವೂ ಪ್ರಾಣಿಗಳಂತೆಯೇ ಆಗುತ್ತದೆ. ಭಾರತದಲ್ಲಿ ಕೂಡ ನಾಲ್ಕು ಕಾಲಿನಲ್ಲಿ ನಡೆದ ಅಕ್ಕ ತಂಗಿಯರಿದ್ದಾರೆ. ಇವರು ಕೂಡ ತೋಳಗಳ ಜೊತೆ ಬೆಳೆದವರೇ…

ಕಮಲಾ ಮತ್ತು ಅಮಲಾ ಸಂಬಂಧದಲ್ಲಿ ಅಕ್ಕ, ತಂಗಿಯರಾಗಿರಲಿಲ್ಲ ಆದರೆ ಇಬ್ಬರೂ ಒಟ್ಟಿಗೇ ತೋಳಗಳ ಸುಪರ್ದಿಯಲ್ಲಿ ಬೆಳೆದವರು. 1920 ರಲ್ಲಿ ಪಶ್ಚಿಮ ಬಂಗಾಳದ ಮಿದಿನಾಪುರದಲ್ಲಿ ಇಬ್ಬರು ಹೆಣ್ಣುಮಕ್ಕಳನ್ನು ತೋಳಗಳ ಗುಂಪಿನಿಂದ ಹೊರತರಲಾಗಿತ್ತು. ಆಗ ಕಮಲಾಳಿಗೆ ಸುಮಾರು 8 ವರ್ಷ ಹಾಗೂ ಅಮಲಾಳಿಗೆ 18 ತಿಂಗಳಿರಬಹುದು.

ತೋಳಗಳ ಜೊತೆ ಬೆಳೆದ ಇವರ ಜೀವನ ಕೂಡ ತೋಳದಂತೆಯೇ ಇತ್ತು. ಊಟ, ಆಟ, ನಿದ್ದೆ, ನಡಿಗೆ ಎಲ್ಲವೂ.. ಕಾಡಿನಿಂದ ಅನಾಥಾಶ್ರಮಕ್ಕೆ ಬಂದ ಇವರು ಅಲ್ಲಿನವರ ಕಣ್ಣಿಗೆ ಭೂತದಂತೆ ಕಾಣಿಸಿದರು. ಏಕೆಂದರೆ ಅವರು ಬಟ್ಟೆ ಹಾಕುತ್ತಿರಲಿಲ್ಲ. ಒಮ್ಮೆ ಹಾಕಿದರೂ ಅದನ್ನು ಹರಿದು ಬಿಸಾಡುತ್ತಿದ್ದರು. ಮೈಯೆಲ್ಲ ತುಂಬ ಹೊಲಸಾಗಿರುತ್ತಿತ್ತು, ಹಸಿಮಾಂಸ ತಿನ್ನುತ್ತಿದ್ದರು. ರಾತ್ರಿ ಹೊತ್ತು ತೋಳಗಳಂತೆ ಕೂಗುತ್ತಿದ್ದರು.

ಇವರನ್ನು ಸಾಮಾನ್ಯ ಮನುಷ್ಯರನ್ನಾಗಿ ಮಾಡಬೇಕೆಂದು ಅನಾಥಾಶ್ರಮದವರು ತುಂಬ ಪ್ರಯತ್ನಪಟ್ಟರು. ಆದರೆ ಅದು ಸಾಧ್ಯವಾಗಲಿಲ್ಲ. 1921 ಸಪ್ಟೆಂಬರ್ ನಲ್ಲಿ ಕಮಲಾ, ಅಮಲಾ ಇಬ್ಬರೂ ಅಸ್ವಸ್ಥರಾದರು. ಅಮಲಾ ಗಂಟಲಿನ ತೊಂದರೆಯಿಂದ ಸಾವನ್ನಪ್ಪಿದಳು. ನಂತರ ಐದು ವರ್ಷದಲ್ಲಿ ಕಮಲಾಳಲ್ಲಿ ಸ್ವಲ್ಪ ಚೇತರಿಕೆ ಕಂಡುಬಂತು. ಅವಳು ಜನರನ್ನು ಗುರುತಿಸಲು ಮತ್ತು ಮಾತನಾಡಲು ಆರಂಭಿಸಿದ್ದಳು. ಆದರೆ 1929ರಲ್ಲಿ ನರ ದೌರ್ಬಲ್ಯದ ಕಾರಣ ಕಮಲಾ ಕೂಡ ಕೊನೆಯುಸಿರೆಳೆದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...