alex Certify ʼರಂಜಾನ್ʼ ಮಾಸದಲ್ಲಿ ಖರ್ಜೂರ ತಿನ್ನುವುದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರಂಜಾನ್ʼ ಮಾಸದಲ್ಲಿ ಖರ್ಜೂರ ತಿನ್ನುವುದರ ಹಿಂದಿದೆ ಈ ಕಾರಣ

ರಂಜಾನ್ ಮಾಸ ಆರಂಭವಾಗಿದೆ. ಮುಸ್ಲಿಂ ಬಾಂಧವರು ಕಟ್ಟುನಿಟ್ಟಿನಿಂದ ವೃತ ಆಚರಣೆಯಲ್ಲಿ ತೊಡಗಿದ್ದಾರೆ. ಸೂರ್ಯೋದಯಕ್ಕೂ ಮುನ್ನ ಮತ್ತು ಸೂರ್ಯಾಸ್ತಕ್ಕೂ ಮೊದಲು ಆಹಾರ ಸೇವಿಸುತ್ತಾರೆ. ಸಂಜೆ ವೃತ ಮುಗಿಯುತ್ತಿದ್ದಂತೆ ವೃದ್ಧರು, ಮಹಿಳೆಯರು, ಮಕ್ಕಳಾದಿಯಾಗಿ ಮೊದಲು ಸೇವಿಸುವುದು ಖರ್ಜೂರವನ್ನ.

ಸೂರ್ಯೋದಯಕ್ಕೂ ಮೊದಲು ಉಪಹಾರ ಸೇವಿಸಿ ನಂತರ ಸಂಜೆಯವರೆಗೂ ಉಪವಾಸವಿದ್ದಾಗ, ದೇಹ ಬಳಲಿರುತ್ತದೆ. ಸುಮಾರು 14 ಗಂಟೆ ಖಾಲಿ ಇರುವ ಹೊಟ್ಟೆಗೆ ತುಂಬಾ ಖಾರವಾದ, ಸಿಹಿಯಾದ ಆಹಾರ ತಿನ್ನುವುದರಿಂದ ದೇಹದ ಸಮತೋಲನ ತಪ್ಪುತ್ತದೆ. ಹೀಗಾಗಿಯೇ ಆಹಾರ ಸೇವಿಸುವುದಕ್ಕೂ ಮೊದಲು ಉಪವಾಸನಿರತರು ಖರ್ಜೂರವನ್ನು ತಿನ್ನುತ್ತಾರೆ. ಈ ಖರ್ಜೂರದಲ್ಲಿ ಗ್ಲೂಕೋಸ್, ಫ್ರಕ್ಟೋಸ್, ಸುಕ್ರೋಸ್, ಫೈಬರ್, ಪೊಟ್ಯಾಶಿಯಮ್, ಮತ್ತು ವಿಟಮಿನ್ ಎ ಜೊತೆಗೆ ನಾರಿನಾಂಶವಿರುತ್ತದೆ. ಹೀಗಾಗಿ ಖರ್ಜೂರದ ಹಣ್ಣು ಸೇವನೆಯಿಂದ ಜೀರ್ಣಾಂಗಗಳು ಇವುಗಳನ್ನ ಹೀರಿಕೊಂಡು, ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ.

ಮುಸ್ಲಿಂಮರ ನಂಬಿಕೆ ಪ್ರಕಾರ ಖರ್ಜೂರ ಮೊಹಮ್ಮದ್ ಪೈಗಂಬರರ ಆಶೀರ್ವಾದದಿಂದ ಸಿಕ್ಕ ಫಲ ಅಂತೆ. ಹೀಗಾಗಿ ಉಪವಾಸ ಮುರಿಯುವುದಕ್ಕೂ ಮುನ್ನ ಖರ್ಜೂರವನ್ನು ಸೇವಿಸುತ್ತಾರೆ. ಈ ಖರ್ಜೂರವನ್ನು ಅರಬ್ ದೇಶಗಳಲ್ಲಿ, ಮರುಭೂಮಿ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...