alex Certify OMG: ‘ಆಹಾರ’ವನ್ನು ತೊಳೆದು ತಿನ್ನುತ್ತೆ ಈ ಪ್ರಾಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ‘ಆಹಾರ’ವನ್ನು ತೊಳೆದು ತಿನ್ನುತ್ತೆ ಈ ಪ್ರಾಣಿ

ರೆಕೂನ್ ಎಂಬುದು ತುಂಬ ವಿಚಿತ್ರ ಪ್ರಾಣಿ. ಇದು ಆಹಾರವನ್ನು ತಿನ್ನುವ ಮೊದಲು ಅದನ್ನು ನೀರಿನಲ್ಲಿ ತೊಳೆದುಕೊಳ್ಳುತ್ತದೆ. ಕೆಲವು ರೆಕೂನ್ ಗಳಂತೂ ನೀರು ಸಿಗದಿದ್ದರೆ ಆಹಾರವನ್ನೇ ತೆಗೆದುಕೊಳ್ಳುವುದಿಲ್ಲ. ಇನ್ನು ಕೆಲವು ನೀರಿಲ್ಲದಿದ್ದರೂ ಆಹಾರ ಸೇವಿಸುತ್ತವೆ.

ರೆಕೂನ್, ಆಹಾರವನ್ನು ಏಕೆ ನೀರಿನಲ್ಲಿ ತೊಳೆಯುತ್ತದೆ ಎಂಬುದು ಇಂದಿಗೂ ತಿಳಿಯದ ವಿಷಯ. ನೀರಿನಲ್ಲೇ ಇರುವ ಜೀವಿಗಳನ್ನು ಬೇಟೆಯಾಡಿ ತಿನ್ನುವಾಗಲೂ ರೆಕೂನ್ ಅವನ್ನು ತೊಳೆದೇ ತಿನ್ನುತ್ತದೆ. ಇವು ಮೀನು, ಕಪ್ಪೆ, ಏಡಿಗಳನ್ನೇ ಹೆಚ್ಚಾಗಿ ತಿನ್ನುತ್ತವೆ.

ರೆಕೂನ್ ಗಳು ನೀರಿರುವ ಮತ್ತು ವಾಸಿಸಲು ಮರಗಳಿರುವಂತ ಜಾಗದಲ್ಲಿ ನೆಲೆಸುತ್ತವೆ. ಸಾಮಾನ್ಯವಾಗಿ ಇವು ಕೆನಡಾ, ಅಮೆರಿಕಾ ಮತ್ತು ಮಧ್ಯ ಅಮೆರಿಕದಲ್ಲಿ ಕಂಡುಬರುತ್ತವೆ. ರೆಕೂನ್ ಗಳ ತುಪ್ಪಳ ತುಂಬ ಆಕರ್ಷಕವಾಗಿರುತ್ತದೆ. ರೆಕೂನ್ ಗಳ ತುಪ್ಪಳ, ಚರ್ಮ ಮತ್ತು ಆಹಾರಕ್ಕಾಗಿ ಇವುಗಳ ಬೇಟೆಯಾಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...