alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಪ್ರಿಯರಿಗೆ ಸ್ಯಾಮ್ ಸಂಗ್ ನಿಂದ ಹೊಸ ಗಿಫ್ಟ್

SUHD-Hero

ನವದೆಹಲಿ: ಟಿವಿ ಉತ್ಪನ್ನ ಮಾರುಕಟ್ಟೆಯಲ್ಲಿ ಖ್ಯಾತಿಯಲ್ಲಿರುವ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಕ್ರಿಕೆಟ್ ಪ್ರೇಮಿಗಳಿಗಾಗಿ ಕ್ರಿಕೆಟ್ ಟಿಕ್ಕರ್ ಆ್ಯಪ್ ಹೊಂದಿರುವ ನೂತನ ಮಾದರಿಯ ‘ಸುಧ್’ (ಸೂಪರ್ ಅಲ್ಟ್ರಾ ಹೈ ಡೆಫಿನಿಷನ್) ಟಿವಿಯನ್ನು ಮಾರುಕಟ್ಟೆಗೆ ತಂದಿದೆ. ದೆಹಲಿಯ ತಾಜ್ ಹೊಟೇಲ್ ನಲ್ಲಿ ಸ್ಯಾಮ್ ಸಂಗ್ ಇಂಡಿಯಾದ ಉಪಾಧ್ಯಕ್ಷ ರಾಜೀವ್ ಭೂತಾನಿ ಟಿವಿ ಬಿಡುಗಡೆ ಮಾಡಿದರು.

ಇದಲ್ಲದೇ  ಸ್ಮಾರ್ಟ್ ಟಿವಿ, ಜಾಯ್ ಬಿಟ್ ಮಾದರಿಗಳ 11 ನೂತನ ಆವಿಷ್ಕಾರಗಳ 44 ಹೊಸ ಮಾದರಿಯ ಟಿವಿಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಟಿವಿ ಗಳು 28 ಸಾವಿರದಿಂದ 4 ಲಕ್ಷ ರೂ. ಬೆಲೆವರೆಗೂ ಲಭ್ಯವಿದೆ.

ಸುಧ್ ಶ್ರೇಣಿಯ 49 ಇಂಚುಗಳ ಟಿವಿ ಬಿಡುಗಡೆ ಮಾಡಲಾಗಿದೆ. ಈ ಟಿವಿಗಳಲ್ಲಿ ಗ್ರಾಹಕರು ಸ್ಮಾರ್ಟ್ ಪೋನಿನಲ್ಲಿರುವ ಹಾಡುಗಳನ್ನು ಟಿವಿ ಮೂಲಕ ಕೇಳಬಹುದು. ಸ್ಮಾರ್ಟ್ ಫೋನನ್ನೇ ರಿಮೋಟ್ ತರಹ ಬಳಸಬಹುದು. ಜಾಯ್ ಬೀಟ್ ಟಿವಿಗಳು ಕೂಡ ಇವೆ.

ಇನ್ನೊಂದು ವಿಶೇಷತೆ ಏನೆಂದರೆ ಕ್ರಿಕೆಟ್ ಟಿಕ್ಕರ್ ಆ್ಯಪ್ ನಿಂದ ಗ್ರಾಹಕರು ಬೇರೆ ಚಾನಲ್ ನೋಡುವಾಗಲೇ ತಮ್ಮ ಇಷ್ಟದ ಕ್ರಿಕೆಟ್ ಸ್ಕೋರ್ ಅಪ್ಡೇಟ್ ಗಳನ್ನು ಲೈವ್ ಆಗಿ ನೋಡಬಹುದು. ಇಂಟರ್ನೆಟ್ ಸೌಲಭ್ಯದಿಂದ ಟಿವಿಯ ಮೇಲ್ಗಡೆ ಕ್ರಿಕೆಟ್ ಸ್ಕೋರ್ ಅಪ್ಲೋಡ್ ಆಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...