alex Certify
ಕನ್ನಡ ದುನಿಯಾ       Mobile App
       

Kannada Duniya

ಪುಣೆಯಲ್ಲಿ ಚೊಚ್ಚಲ ಅಂಡರ್ ವಾಟರ್ ಹಬ್ಬ

water-fest-nwe

ನೀರಿನಲ್ಲಿ ಆಟವಾಡೋದು ಅಂದ್ರೆ ಎಲ್ಲರಿಗೂ ಇಷ್ಟವೇ. ಅಂಡರ್ ವಾಟರ್ ಗೇಮ್ಸ್ ಬಗ್ಗೆ ನೋಡಿರ್ತೀರಾ, ಕೇಳಿರ್ತೀರಾ, ಒಮ್ಮೆಯಾದ್ರೂ ಆ ಅದ್ಭುತ ಅನುಭವ ಪಡೆಯಬೇಕು ಅನ್ನೋ ಆಸೆ ಎಲ್ಲರಿಗೂ ಇದ್ದೇ ಇರುತ್ತೆ. ಆ ಸಮಯ ಈಗ ಹತ್ತಿರವಾಗಿದೆ.

ಪುಣೆಯ ಯರವಾಡದಲ್ಲಿರುವ ಡಿವಿಶನಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಚೊಚ್ಚಲ ಅಂಡರ್ ವಾಟರ್ ಫೆಸ್ಟಿವಲ್ ಆಯೋಜಿಸಲಾಗಿದೆ. ಅಯ್ಯೋ ನನಗೆ ಈಜು ಬರೋಲ್ಲ, ಅಂಡರ್ ವಾಟರ್ ಹಬ್ಬದಲ್ಲಿ ಹೇಗೆ ಪಾಲ್ಗೊಳ್ಳಲಿ ಅಂತೆಲ್ಲಾ ತಲೆಕೆಡಿಸಿಕೊಳ್ಬೇಡಿ, ನಿಮಗೆ ಸ್ವಿಮ್ಮಿಂಗ್ ಬರಬೇಕೆಂದೇನೂ ಇಲ್ಲ. ಈಜು ಬಾರದೇ ಇರುವವರಿಗಾಗಿಯೂ ವಿಶೇಷ ಆಟಗಳಿವೆ.

ನೀರಿನಲ್ಲಿ ನೀವೆಷ್ಟು ಆರಾಮಾಗಿ ಇರಬಲ್ಲಿರಿ ಎಂಬುದರ ಆಧಾರದ ಮೇಲೆ ಆಟಗಳನ್ನು ಆಯ್ಕೆ ಮಾಡಿಕೊಳ್ಳಿ. ಚೆನ್ನಾಗಿ ಈಜು ಬರುವವರು ಸ್ಕೂಬಾ ಡೈವಿಂಗ್ ಟ್ರೈ ಮಾಡಬಹುದು, ಅಲ್ಲಿ ತಜ್ಞರು ನಿಮಗೆ ಗೈಡ್ ಮಾಡ್ತಾರೆ. ವಿಶೇಷ ಅಂದ್ರೆ ಅಂಡರ್ ವಾಟರ್ ಫೋಟೋಗ್ರಾಫರ್ ಗಳು ಕೂಡ ಇರ್ತಾರೆ. ನಿಮ್ಮ ವಿಶಿಷ್ಟ ಅನುಭವಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತಾರೆ. ಈಜುಡುಗೆ ಇಲ್ಲ ಅಂತಾದ್ರೆ ಅದನ್ನು ಕೂಡ ಅಲ್ಲಿಯೇ ನೀವು ಕೊಂಡುಕೊಳ್ಳಬಹುದು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...