alex Certify
ಕನ್ನಡ ದುನಿಯಾ       Mobile App
       

Kannada Duniya

ಚುಂಬನದ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ವಿಷ್ಯ….

ಸಾರ್ವಜನಿಕ ಸ್ಥಳದಲ್ಲಿ ಚುಂಬನ ನಮ್ಮ ದೇಶದಲ್ಲಿ ಈಗಲೂ ನಿಷಿದ್ಧ. ಆದ್ರೆ ವಿದೇಶಗಳಲ್ಲಿ ಮುತ್ತು ಸಾಮಾನ್ಯ ಸಂಗತಿ. ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್ ಮಾಡುವ ಜನರು ಸುತ್ತಮುತ್ತ ಯಾರಿದ್ದಾರೆ ಎಂಬುದನ್ನು ನೋಡುವುದಿಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಮೈ ಮರೆತು ಚುಂಬನ ನೀಡುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗ್ತಿರುತ್ತವೆ. ಅದೇನೇ ಇರಲಿ ಚುಂಬನದ ಬಗ್ಗೆ ಅಧ್ಯಯನವೊಂದು ಆಶ್ಚರ್ಯಕರ ಸಂಗತಿಯನ್ನು ಹೇಳಿದೆ.

ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಪರಸ್ಪರ ಚುಂಬನ ಸಾಮಾನ್ಯ ಸಂಗತಿ. ಪ್ರೀತಿಯಿರಲಿ, ನೋವಿರಲಿ ಅವರು ಚುಂಬನದ ಮೂಲಕ ತೋರಿಸುತ್ತಾರೆ ಎಂದು ನಂಬಲಾಗಿದೆ. ಆದ್ರೆ ಚುಂಬನದ ಬಗ್ಗೆ ನಡೆದ ಅಧ್ಯಯನವೊಂದು ಬೇರೆ ವಿಷ್ಯವನ್ನೇ ಹೇಳಿದೆ.

ಸುಮಾರು 168 ಸಂಸ್ಕೃತಿಗಳನ್ನು ಅಧ್ಯಯನ ಮಾಡಲಾಗಿದೆ. ಅದ್ರಲ್ಲಿ ಶೇಕಡಾ 46ರಷ್ಟು ಸಂಸ್ಕೃತಿಯಲ್ಲಿ ಮಾತ್ರ ಜನರು ಸಾರ್ವಜನಿಕವಾಗಿರಲಿ ಇಲ್ಲ ಖಾಸಗಿಯಾಗಿರಲಿ ಸಂಗಾತಿಗೆ ಮುತ್ತು ನೀಡ್ತಾರೆಂಬ ಸಂಗತಿ ಬಹಿರಂಗವಾಗಿದೆ.

ಪ್ರಾಣಿಗಳು ಕೂಡ ಮುತ್ತು ಕೊಡುತ್ತವೆ ಎಂಬುದನ್ನು ಅಧ್ಯಯನದಲ್ಲಿ ಹೇಳಲಾಗಿದೆ. ಚುಂಬನದ ಸಂಸ್ಕೃತಿ ಈಗಿನದಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಇತ್ತೀಚಿಗೆ ಚುಂಬನ ಪ್ರವೃತ್ತಿ ಹೆಚ್ಚಾಗಿದೆ. ಹಾಗಂತ ಚುಂಬನ ಇತ್ತೀಚಿಗೆ ಬಂದಿದ್ದಲ್ಲ. ಯುಕೆ ವಿಶ್ವವಿದ್ಯಾನಿಲಯದ ಪ್ರಕಾರ, ಚುಂಬನಕ್ಕೆ ಸುಮಾರು 3500 ವರ್ಷಗಳಷ್ಟು ಇತಿಹಾಸವಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...