alex Certify
ಕನ್ನಡ ದುನಿಯಾ       Mobile App
       

Kannada Duniya

ನಿವೃತ್ತಿಯಾದ ಮೇಲೆ ಸೆಕ್ಸ್ ವರ್ಕರ್ಸ್ ಎಲ್ಲಿಗೆ ಹೋಗ್ತಾರೆ?

sex-worker-1

ಹೊಟ್ಟೆ ಪಾಡಿಗಾಗಿ ಜನ ಏನೆಲ್ಲ ಕಸರತ್ತು ಮಾಡ್ತಾರೆ. ತುತ್ತು ಅನ್ನಕ್ಕಾಗಿ ಮೈಮಾರಿಕೊಳ್ಳುವ ಅನಿವಾರ್ಯತೆ ಕೆಲವರಿಗಿದೆ. ಮನಸ್ಸಿಲ್ಲದಿದ್ದರೂ ದೇಹ ನೀಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಸಮಾಜ ದೂರ ಇಡುವ ಇಂತ ಮಹಿಳೆಯರ ನಿವೃತ್ತಿ ಬದುಕು ಮಾತ್ರ ನಾಯಿಗಿಂತ ಕಡೆ.

ಯವ್ವನದಲ್ಲಿ ಗ್ರಾಹಕರನ್ನು ಸೆಳೆಯುವ ಈ ಹುಡುಗಿಯರಿಗೆ ವಯಸ್ಸಾಗ್ತಿದ್ದಂತೆ ಭಯ ಕಾಡಲು ಶುರುವಾಗುತ್ತದೆ. ಗ್ರಾಹಕರು ಸಿಗದಿರುವಾಗ ಜೀವನ ದುಸ್ಥರವಾಗುತ್ತದೆ. ವೇಶ್ಯಾವಾಟಿಕೆ ಸ್ಥಳಗಳಿಂದ ಇವರನ್ನು ಹೊರಹಾಕಲಾಗುತ್ತದೆ. ಬದುಕು ಬೀದಿಗೆ ಬರುತ್ತೆ.

ಇವರ ಬದುಕಿನ ಬಗ್ಗೆ ಅನೇಕ ಚಿತ್ರಗಳು ಬಂದಿವೆ. ಸೆಕ್ಸ್ ವರ್ಕರ್ಸ್ ನೋವು ಕಥೆಯಾಗಿದೆ. ಈಗ ವೃದ್ದೆಯೊಬ್ಬಳು ತನ್ನ ಬದುಕಿನ ನೋವಿನ ಕಥೆಯನ್ನು ಬಿಚ್ಚಿಟ್ಟಿದ್ದಾಳೆ. ಆಕೆ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಹೀನಾಯ ಸ್ಥಿತಿಯಲ್ಲಿ ಮಲಗಿದ್ದಳು. ನಿತೀಶ್ ಎಂಬ ವ್ಯಕ್ತಿ ವೃದ್ಧೆಯನ್ನು ನೋಡಿದ್ದಾರೆ. ಆಕೆಗೆ ಉಪಚಾರ ಮಾಡಿದ್ದಾರೆ. ಹಾಗೆ ಆಕೆಯ ಹಿಂದಿನ ಕಥೆ ಕೇಳಿ ಕಣ್ಣೀರಿಟ್ಟಿದ್ದಾರೆ.

ಆಕೆ ಯವ್ವನದಲ್ಲಿ ಸೆಕ್ಸ್ ವರ್ಕರ್ ಆಗಿದ್ದಳಂತೆ. ವಯಸ್ಸಾಗ್ತಾ ಇದ್ದಂತೆ ದುಡಿಮೆ ಕಡಿಮೆಯಾಯ್ತಂತೆ. ಹಾಗಾಗಿ ಆಕೆಯನ್ನು ಹೊರಹಾಕಲಾಯ್ತಂತೆ. ಇದು ನನ್ನದೊಂದೆ ಕಥೆಯಲ್ಲ. ವಯಸ್ಸಾದ ಸೆಕ್ಸ್ ವರ್ಕರ್ಸ್ ಎಲ್ಲರ ಕಥೆಯೂ ಇದೇ ಎನ್ನುತ್ತಾಳೆ ವೃದ್ಧೆ.

ಗರ್ಭನಿರೋಧಕ ಮಾತ್ರೆಗಳನ್ನು ಸೆಕ್ಸ್ ವರ್ಕರ್ಸ್ ಸೇವಿಸ್ತಾರೆ. ಮುಟ್ಟು ಮುಂದೆ ಹೋಗುವ ಮಾತ್ರೆ ಕೂಡ ಅವರ ಸಂಗಾತಿಯಂತೆ. ಇದರಿಂದ ಅನೇಕ ಖಾಯಿಲೆಗಳಿಗೆ ತುತ್ತಾಗ್ತಾರೆ. ಕೆಲವರು ಏಡ್ಸ್ ರೋಗದಿಂದ ನರಳುತ್ತಾರೆ. ಏನೇ  ಇದ್ರೂ ಮುಪ್ಪಿನಲ್ಲಿ ಭಿಕ್ಷೆ ಬೇಡಿ, ಬೀದಿಯಲ್ಲಿ ಬದುಕುವುದು ತಪ್ಪುವುದಿಲ್ಲ ಎನ್ನುತ್ತಾಳೆ ವೃದ್ಧೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...