alex Certify
ಕನ್ನಡ ದುನಿಯಾ       Mobile App
       

Kannada Duniya

ಎಂಜಿನಿಯರ್ ಅಲ್ಲ, ಆದ್ರೂ ತಯಾರಿಸಿದ್ದಾನೆ ವಿಭಿನ್ನ ಕಾರ್

car-boy-1

19 ವರ್ಷದ ಪ್ರೇಮ್ ಠಾಕೂರ್ ಮೆಕ್ಯಾನಿಕ್ ಅಲ್ಲ, ಎಂಜಿನಿಯರ್ ಕೂಡ ಅಲ್ಲ. ಆದ್ರೂ ಕಾರ್ ತಯಾರಿಸಿದ್ದಾನೆ. ಅದ್ಹೇಗೆ ಅಂತೀರಾ? ಯುಟ್ಯೂಬ್ ವಿಡಿಯೋಗಳನ್ನು ನೋಡಿ ಪ್ರೇಮ್ ಈ ಸಾಧನೆ ಮಾಡಿದ್ದಾನೆ.

ಪ್ರೇಮ್ ಠಾಕೂರ್ ಬಳಿ ಹೆಚ್ಚು ಹಣವಿರಲಿಲ್ಲ, ಎಂಜಿನಿಯರಿಂಗ್ ಓದಿಲ್ಲ, ಆದ್ರೆ ಕಲಿಯುವ ಹಂಬಲವಿತ್ತು. ಮನೆಯಲ್ಲಿ ಇಂಟರ್ನೆಟ್ ಸೌಲಭ್ಯ ಇದೆ, ಕಲಿಯುವ ಮನಸ್ಸಿದೆ ಅಂದ್ಮೇಲೆ ಯಾವುದೂ ಅಸಾಧ್ಯವಲ್ಲ ಎಂದುಕೊಂಡ ಪ್ರೇಮ್, ಯುಟ್ಯೂಬ್ ಮೊರೆ ಹೋಗಿದ್ದ. ಕಾರುಗಳನ್ನು ತಯಾರಿಸುವುದು ಹೇಗೆ, ಯಾವ್ಯಾವ ಬಿಡಿ ಭಾಗಗಳು ಬೇಕು ಅನ್ನೋದನ್ನೆಲ್ಲ ನೋಡಿ ತಾನೇ ಕಾರ್ಯಾಚರಣೆಗಿಳಿದ. ಕಷ್ಟಪಟ್ಟು ಡಿಫರೆಂಟ್ ಆಗಿರೋ ಕಾರ್ ಒಂದನ್ನು ತಯಾರಿಸಿದ್ದಾನೆ.

ಇದಕ್ಕೆ ತಗುಲಿರುವ ವೆಚ್ಚ 2.5 ಲಕ್ಷ ರೂಪಾಯಿ. ಪೋಷಕರ ಸಹಕಾರ ಇಲ್ಲದೇ ಇದ್ದಿದ್ರೆ ಇದ್ಯಾವುದೂ ಸಾಧ್ಯವಾಗ್ತಿರಲಿಲ್ಲ ಎನ್ನುತ್ತಾನೆ ಪ್ರೇಮ್. ಈಗ ತಾನೇ ತಯಾರಿಸುವ ಕಾರಿನಲ್ಲಿ ಖುಷಿಯಿಂದ ಕುಳಿತು ನವಿ ಮುಂಬೈಗೆ ಒಂದು ರೌಂಡ್ ಹೋಗಿ ಬರೋದು ಪ್ರೇಮ್ ಠಾಕೂರ್ ಮತ್ತು ಮನೆಯವರ ನೆಚ್ಚಿನ ಹವ್ಯಾಸ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...