alex Certify
ಕನ್ನಡ ದುನಿಯಾ       Mobile App
       

Kannada Duniya

ಚಂದ್ರ ಗ್ರಹಣದ ವೇಳೆ ಗರ್ಭಿಣಿಯರು ಈ ಕೆಲಸ ಮಾಡಬೇಡಿ

ಚಂದ್ರ ಗ್ರಹಣಕ್ಕೆ ಕೆಲವೇ ಗಂಟೆಗಳು ಬಾಕಿಯಿವೆ. ಈಗಾಗಲೇ ಸೂತಕ ಶುರುವಾಗಿದೆ. ಗ್ರಹಣ ಕಾಲದಲ್ಲಿ ಆಹಾರ ಸೇವನೆ ನಿಷಿದ್ಧವೆಂದು ಹೇಳಲಾಗುತ್ತದೆ. ಗ್ರಹಣ ಕಾಲದಲ್ಲಿ ಗರ್ಭಿಣಿಯರು ವಿಶೇಷ ಗಮನ ನೀಡುವ ಅಗತ್ಯವಿದೆ. ಗರ್ಭಿಣಿಯರು ಗ್ರಹಣ ಕಾಲದಲ್ಲಿ ಮನೆಯಿಂದ ಹೊರಗೆ ಬೀಳಬಾರದು. ಗ್ರಹಣದ ದೋಷಿತ ಕಿರಣ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಬೀಳಬಾರದು.

ಗರ್ಭಿಣಿಯರು ಗ್ರಹಣ ಶುರುವಾದ ಮೇಲೆ ಸ್ನಾನ ಮಾಡುವ ಅಗತ್ಯವಿಲ್ಲ. ಗ್ರಹಣ ಮುಗಿದ ಮೇಲೆ ಒಮ್ಮೆ ಸ್ನಾನ ಮಾಡಿದ್ರೆ ಸಾಕು. ಗ್ರಹಣದ ದೋಷಿತ ಕಿರಣಗಳ ಪ್ರಭಾವ ಬೀಳದಿರಲು ಸ್ನಾನ ಮಾಡಬೇಕು.

ಕೆಲವರು ಗ್ರಹಣದ ವೇಳೆ ಆಹಾರ ಸೇವನೆ ಮಾಡಬಾರದೆಂದು ಸಲಹೆ ನೀಡುತ್ತಾರೆ. ಗ್ರಹಣದ ಕಿರಣಗಳು ಆಹಾರವನ್ನು ಕಲುಷಿತಗೊಳಿಸುತ್ತವೆ ಎನ್ನುವ ಕಾರಣಕ್ಕೆ ಹೀಗೆ ಹೇಳಲಾಗುತ್ತದೆ. ಗ್ರಹಣಕ್ಕಿಂತ ಮೊದಲು ಉಳಿದಿರುವ ಆಹಾರಕ್ಕೆ ತುಳಸಿ ಹಾಕಿಟ್ಟರೆ ನಂತ್ರ ಅದನ್ನು ಸೇವಿಸಬಹುದು. ಅನಾರೋಗ್ಯ ಸಮಸ್ಯೆಯಿರುವ ಗರ್ಭಿಣಿಯರು ಆಹಾರ ಸೇವನೆ ಮಾಡಬಹುದೆಂದು ತಜ್ಞರು ಹೇಳಿದ್ದಾರೆ.

ಗ್ರಹಣ ಕಾಲದಲ್ಲಿ ಗರ್ಭಿಣಿಯರು ಚೂಪಾದ ವಸ್ತುಗಳನ್ನು ಮುಟ್ಟಬಾರದು. ಚಾಕು, ಚೂರಿ, ಸೂಜಿ, ಪೆನ್ನನ್ನು ಮುಟ್ಟಬಾರದು.

ಗ್ರಹಣ ಕಾಲದಲ್ಲಿ ಮನೆಯಿಂದ ಹೊರಗೆ ಹೋದ್ರೆ ಅದು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಮಕ್ಕಳು ಜನಿಸಿದ ಮೇಲೆ ಅದ್ರ ಪರಿಣಾಮ ಕಾಣುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...