alex Certify
ಕನ್ನಡ ದುನಿಯಾ       Mobile App
       

Kannada Duniya

ನೌಕರಿಗಾಗಿ 18 ಕಿಲೋಮೀಟರ್ ಓಡಿದ 8 ತಿಂಗಳ ಗರ್ಭಿಣಿ…!

phpthumb_generated_thumbnail

ಛಲ ಬಿಡದೆ ಹೋರಾಡಿದ್ರೆ ಎಲ್ಲವೂ ಸಾಧ್ಯ.ಮನಸ್ಸಿದ್ದರೆ ಏನನ್ನು ಬೇಕಾದ್ರೂ ಸಾಧಿಸಬಹುದು. ಇದನ್ನು ಬಲವಾಗಿ ನಂಬಿರುವ ರಾಜಸ್ಥಾನದ 8 ತಿಂಗಳ ಗರ್ಭಿಣಿಯೊಬ್ಬಳು ಉದ್ಯೋಗ ಪಡೆಯಲು 18 ಕಿಲೋಮೀಟರ್ ಓಡಿದ್ದಾಳೆ.

ರಾಜಸ್ಥಾನದ ಬಿಕನೇರ್ ನ 8 ತಿಂಗಳ ಗರ್ಭಿಣಿ ವಿಜಯಶ್ರೀ ಫಾರೆಸ್ಟ್ ಗಾರ್ಡ್ ಕೆಲಸಕ್ಕಾಗಿ ಲಿಖಿತ ಪರೀಕ್ಷೆ ಬರೆದಿದ್ದಳು. ಲಿಖಿತ ಪರೀಕ್ಷೆ ನಂತ್ರ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಯುತ್ತದೆ. ಅದ್ರಲ್ಲಿ ಅಭ್ಯರ್ಥಿಗಳು 18 ಕಿಲೋಮೀಟರ್ ಓಡಬೇಕಾಗುತ್ತೆ. ವಿಜಯಶ್ರೀ ತನ್ನ ಹಾಗೂ ಮಗುವಿನ ಜೀವವನ್ನು ಕೈನಲ್ಲಿಡಿದುಕೊಂಡು ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದಳು. 18 ಕಿಲೋಮೀಟರ್ ಓಟವನ್ನು ಪೂರ್ಣಗೊಳಿಸಿದಳು.

ಮೊದಲು ಅರಣ್ಯಾಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ವಿಜಯಶ್ರೀ ವೈದ್ಯರಿಂದ ಆರೋಗ್ಯ ಪ್ರಮಾಣಪತ್ರ ತಂದುಕೊಟ್ಟಳು. ಆದ್ರೂ ಅರಣ್ಯಾಧಿಕಾರಿಗಳು ಒಪ್ಪಲಿಲ್ಲ. ನಂತ್ರ ಸ್ವಇಚ್ಛೆಯಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ವಿಜಯಶ್ರೀ ಬರೆದುಕೊಟ್ಟಿದ್ದಾರೆ. ಆಗ ಅನಿವಾರ್ಯವಾಗಿ ಅಧಿಕಾರಿಗಳು ಓಡಲು ಅನುಮತಿ ನೀಡಿದ್ದಾರೆ.

ರಾಜಸ್ಥಾನದ ಕೃಷಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ 3 ಗಂಟೆ 35 ನಿಮಿಷಗಳನ್ನು ತೆಗೆದುಕೊಂಡು ವಿಜಯಶ್ರೀ 18 ಕಿಲೋಮೀಟರ್ ಓಟವನ್ನು ಪೂರ್ತಿಗೊಳಿಸಿದ್ದಾಳೆ. ಈ ಮೂಲಕ ಉಳಿದ ಮಹಿಳೆಯರಿಗೂ ಧೈರ್ಯ ತುಂಬಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...