alex Certify
ಕನ್ನಡ ದುನಿಯಾ       Mobile App
       

Kannada Duniya

ಪವರ್ ಫುಲ್ ಜಾಹಿರಾತಿಗೆ ಭರ್ಜರಿ ರೆಸ್ಪಾನ್ಸ್

ಮಕ್ಕಳಿಗೆ ಏನು ಬೇಕೆಂಬುದು ಅಮ್ಮನಿಗೆ ಗೊತ್ತು. ಈ ಮಾತನ್ನು ನಾವು ಅನೇಕ ಬಾರಿ ಕೇಳಿರ್ತೇವೆ. ಇದ್ರಲ್ಲಿ ಸತ್ಯ ಅಡಗಿದೆ ಕೂಡ. ಅಮ್ಮನಾದವಳಿಗೆ ಮಕ್ಕಳಿಗೆ ಏನು ಬೇಕು ಎಂಬುದು ಗೊತ್ತಿರುತ್ತದೆ. ಮಸ್ಕಿಟೋ ಕಂಪನಿಯೊಂದು ಅಮ್ಮನಿಗೆ ಎಲ್ಲವೂ ಗೊತ್ತು ಎಂಬುದನ್ನು ಆಧಾರವಾಗಿಟ್ಟುಕೊಂಡು ಹೊಸ ಜಾಹಿರಾತೊಂದನ್ನು ನಿರ್ಮಾಣ ಮಾಡಿದೆ.

ಕಂಪನಿ ಮಸ್ಕಿಟೋ ಹೊಸ ಜಾಹಿರಾತಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಫೇಸ್ಬುಕ್ ನಲ್ಲಿ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಜಾಹಿರಾತನ್ನು 5.2 ಮಿಲಿಯನ್ ಬಾರಿ ವೀಕ್ಷಣೆ ಮಾಡಲಾಗಿದೆ. 1.6 ಲಕ್ಷ ಪ್ರತಿಕ್ರಿಯೆ ಹಾಗೂ  1.4 ಲಕ್ಷ ಹಂಚಿಕೆಯಾಗಿದೆ.

ಸುಮಾರು 4 ನಿಮಿಷದ ಜಾಹಿರಾತು ಇದಾಗಿದೆ. ಇದ್ರಲ್ಲಿ ದೊಡ್ಡ ಕುಟುಂಬವೊಂದು ಊಟ ಮಾಡಲು ಕುಳಿತಿರುತ್ತದೆ. ಈ ವೇಳೆ ಮಗನ ಮುಂದಿಟ್ಟಿದ್ದ ಆಹಾರವನ್ನು ತಾಯಿ ತೆಗೆದು ಬೇರೆ ಕಡೆ ಇಡುತ್ತಾಳೆ. ಇದಕ್ಕೆ ಎಲ್ಲರೂ ವಿರೋಧ ವ್ಯಕ್ತಪಡಿಸ್ತಾರೆ. ಆದ್ರೆ ಮನೆಯ ಹಿರಿ ವ್ಯಕ್ತಿ ಬೆಂಬಲ ನೀಡ್ತಾನೆ. ಮಗ 10 ರೂಪಾಯಿಯನ್ನು ತಾಯಿ ಪರ್ಸ್ ನಿಂದ ತೆಗೆದುಕೊಂಡು ಹೋಗಿಲ್ಲ. ಕದ್ದಿದ್ದಾನೆ. ಇದಕ್ಕೆ ತಾಯಿ ನೀಡಿದ ಶಿಕ್ಷೆ ಸರಿಯಾಗಿದೆ ಎನ್ನುತ್ತಾನೆ. ನಂತ್ರ ಮಕ್ಕಳ ಮುಂದಿನ ಭವಿಷ್ಯ ನಿಮ್ಮ ಕೈನಲ್ಲಿದೆ ಎಂದು ಸೊಳ್ಳೆ ಓಡಿಸುವ ಮಷಿನ್ ಹಾಕುತ್ತಾಳೆ ತಾಯಿ. ಈ ಜಾಹಿರಾತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...