alex Certify
ಕನ್ನಡ ದುನಿಯಾ       Mobile App
       

Kannada Duniya

ಡೌನ್ ಲೋಡ್ ನಲ್ಲಿ ದಾಖಲೆ ಬರೆದ ಫೋಕೆಮಾನ್

pokemon-go-new

ಬಿಡುಗಡೆಯಾದ ಒಂದು ವಾರದಲ್ಲೇ 72 ಲಕ್ಷ ಡೌನ್ ಲೋಡ್ ಆಗುವ ಮೂಲಕ ಅಪಾಯಕಾರಿ ಗೇಮ್ ಎಂದೇ ಹೇಳಲಾಗುವ ಪೋಕೆಮಾನ್ ಗೋ ದಾಖಲೆ ಬರೆದಿದೆ. ಪ್ರಸ್ತುತ ವಿಶ್ವದೆಲ್ಲೆಡೆ 7.5 ಕೋಟಿ ಮಂದಿ ಈ ಗೇಮ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೊಬೈಲ್ ಗೇಮ್ ‘ಆ್ಯಂಗ್ರಿ ಬರ್ಡ್’ ಬಿಡುಗಡೆಯಾದ ಮೊದಲ ವಾರ 22 ಲಕ್ಷ ಡೌನ್ ಲೋಡ್ ಆಗಿದ್ದರೆ, ‘ಕ್ಯಾಂಡಿಕ್ರಷ್’ 18 ಲಕ್ಷ ಡೌನ್ ಲೋಡ್ ಆಗಿತ್ತು. ‘ಪೋಕೆಮಾನ್ ಗೋ’ 72 ಲಕ್ಷ ಡೌನ್ ಲೋಡ್ ಆಗಿದೆ. 1990 ಕ್ಕೂ ಮೊದಲೇ ಈ ಆಟ ಇತ್ತಾದರೂ ಅದು ಜನಪ್ರಿಯವಾಗಿರಲಿಲ್ಲ. ಜಪಾನ್ ಕಂಪನಿ ಆವಿಷ್ಕರಿಸಿದ ಸುಧಾರಿತ ಆವೃತ್ತಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಸುಮಾರು 37 ದೇಶಗಳಲ್ಲಿ ಸ್ಮಾರ್ಟ್ ಫೋನ್ ಲೋಕದಲ್ಲಿ ಹುಚ್ಚು ಹಿಡಿಸಿದೆ.

ಇತರೆ ಮೊಬೈಲ್ ಗೇಮ್ ಗಳಂತೆಯೇ ಪೋಕೆಮಾನ್ ಗೋ ಕೂಡ ಒಂದಾಗಿದ್ದು, ಇದನ್ನು ಆಡುವಾಗ ಹೊರಗೆ ಸಂಚರಿಸಬೇಕು. ಪೋಕೆಮಾನ್ ಹೆಸರಿನ ಗೊಂಬೆ ಮೊಬೈಲ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲಿರುವ ಬಾಲ್ ಅನ್ನು ಎಸೆದು ಹಿಡಿಯಲು ಮುಂದಾಗಬೇಕು. ಆಗ ಹೆಚ್ಚೆಚ್ಚು ಪಾಯಿಂಟ್ಸ್ ಸಿಗುತ್ತವೆ.

ಪೋಕೆಮಾನ್ ಗೋ ಆಡುತ್ತಾ ಜನ ರಸ್ತೆ ಮೇಲೆ ಸಂಚರಿಸುತ್ತಾರೆ. ಗಮನವೆಲ್ಲಾ ಪೋಕೆಮಾನ್ ಕಡೆಗೆ ಕೇಂದ್ರೀಕೃತವಾಗುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಈಗಾಗಲೇ ಹಲವು ಅಪಘಾತ ನಡೆದಿವೆ. ಹೀಗಾಗಿ ಮುಂಬೈ ರಸ್ತೆಗಳಲ್ಲಿ ಪೋಕೆಮಾನ್ ಆಡದಂತೆ ನಿಷೇಧಿಸಲಾಗಿದೆ.

ಭಾರತದಲ್ಲಿ ಪೋಕೆಮಾನ್ ಇನ್ನೂ ಬಿಡುಗಡೆ ಮಾಡಿಲ್ಲವಾದರೂ, ಅಂತರ್ಜಾಲದಲ್ಲಿ ಡೌನ್ ಕೋಡ್ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಆಟವಾಡುತ್ತಾ ಹೋದಂತೆ ಒಂದೊಂದೇ ಹಂತ ದಾಟುತ್ತದೆ. ಇದೊಂದು ಸ್ಥಳ ಆಧಾರಿತ ಗೇಮ್ ಆಗಿದ್ದು, ಹೊರಗೆ ಆಡಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...