alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ಬಳಕೆದಾರರಿಗೊಂದು ‘ಶಾಕಿಂಗ್’ ಸುದ್ದಿ…!

ಯಾವುದೇ ಆಗಲಿ ಅತಿಯಾಗಿ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದು ಹಲವು ಬಾರಿ ಸಾಬೀತಾಗಿದೆ. ಈಗ ಇಂಟರ್ನೆಟ್ ಕೇವಲ ಕಂಪ್ಯೂಟರ್ ಗೆ ಮಾತ್ರ ಸೀಮಿತವಾಗಿಲ್ಲ. ಸ್ಮಾರ್ಟ್ ಪೋನ್ ಗೂ ಲಭಿಸುತ್ತಿದೆ. ಜಗತ್ತಿನ ಇಂಟರ್ನೆಟ್ ಬಳಕೆದಾರರ ಪೈಕಿ ಶೇ.6 ರಷ್ಟು ಮಂದಿ ಸತತವಾಗಿ ಇಂಟರ್ನೆಟ್ ನಲ್ಲೇ ಮುಳುಗಿರುವ ತಮ್ಮ ಗೀಳಿನಿಂದಾಗಿ ಆರೋಗ್ಯ ಹಾಗೂ ಸಾಮಾಜಿಕ ಬಾಂಧವ್ಯಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂಬ ಶಾಕಿಂಗ್ ಮಾಹಿತಿ ಹೊರ ಬಿದ್ದಿದೆ.

ಇಂಟರ್ನೆಟ್ ಬಳಸುತ್ತಿರುವ ದೇಶಗಳ ಹಲವರನ್ನು ಸಂದರ್ಶಿಸಿರುವ ತಜ್ಞರು ಈ ವರದಿ ತಯಾರಿಸಿದ್ದು, ಇದರ ಪ್ರಕಾರ ಶೇ. 6 ರಷ್ಟು ಮಂದಿ ಇಂಟರ್ನೆಟ್ ಅಡಿಕ್ಷನ್ ಗೆ ಒಳಗಾಗಿ ತಮ್ಮ ಸಾಮಾಜಿಕ ಬದುಕಿಗೆ ಧಕ್ಕೆ ತಂದುಕೊಳ್ಳುತ್ತಿದ್ದಾರೆ. ಅಲ್ಲದೇ ಆರೋಗ್ಯವನ್ನೂ ನಿರ್ಲಕ್ಷಿಸುತ್ತಿದ್ದಾರೆ ಎಂದು ತಿಳಿಸಿದೆ.

ಇವರ ಇಂಟರ್ನೆಟ್ ಗೀಳಿನಿಂದಾಗಿ ಗಂಡ-ಹೆಂಡತಿ, ಪೋಷಕರು-ಮಕ್ಕಳು ಹೀಗೆ ಸಂಬಂಧಗಳಲ್ಲಿ ಬಿರುಕು ಮೂಡುತ್ತಿದೆ ಎಂದು ತಿಳಿಸಿರುವ ವರದಿ, ಇಂಟರ್ನೆಟ್ ಕಾರಣಕ್ಕಾಗಿ ಸತತವಾಗಿ ಒಂದೇ ಕಡೆ ಕೂರುವ ಕಾರಣ ಆರೋಗ್ಯವನ್ನೂ ಹಾಳು ಮಾಡಿಕೊಂಡು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಎಚ್ಚರಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...