alex Certify
ಕನ್ನಡ ದುನಿಯಾ       Mobile App
       

Kannada Duniya

ಮೈ ಕೊರೆಯುವ ಚಳಿಗೆ ಹೇಗಾಗಿದ್ದಾನೆ ನೋಡಿ ಈ ಪುಟ್ಟ ಬಾಲಕ

ಚೀನಾದಲ್ಲೂ ಈಗ ಮೈಕೊರೆಯುವಂಥ ಚಳಿ. ಉಷ್ಣಾಂಶ -9 ಡಿಗ್ರಿಗೆ ಇಳಿದಿದೆ. ಚಳಿಯ ನಡುವೆಯೂ ಶಾಲೆಗೆ ಬಂದ ಪುಟ್ಟ ಬಾಲಕ ವಾಂಗ್ ಫ್ಯುಮನ್ ನನ್ನು ನೋಡಿ ಎಲ್ರೂ ಬೆಕ್ಕಸ ಬೆರಗಾಗಿದ್ರು. ಅವನ ತಲೆಯನ್ನು ನೋಡಿ ಅಚ್ಚರಿಪಟ್ಟಿದ್ರು.

ಯಾಕೆ ಗೊತ್ತಾ? ಚಳಿಯ ಹೊಡತಕ್ಕೆ ಅವನ ತಲೆಕೂದಲು ಹೆಪ್ಪುಗಟ್ಟಿತ್ತು. ತಲೆ ಪೂರ್ತಿ ಮಂಜುಗಡ್ಡೆಯಂತಾಗಿ ಬೆಳ್ಳಗೆ ಕಾಣುತ್ತಿತ್ತು. ಅವನ ಐಬ್ರೋ, ಐಲ್ಯಾಶಸ್ ಕೂಡ ಫ್ರೀಝ್ ಆಗಿತ್ತು. ಚಳಿಯಿಂದಾಗಿ ಕೆನ್ನೆಗಳು ಕೆಂಪಗೆ ಟೊಮೆಟೋ ಹಣ್ಣಿನಂತಾಗಿಬಿಟ್ಟಿದ್ದವು.

8 ವರ್ಷದ ಬಾಲಕ ವಾಂಗ್ ಮನೆ ಶಾಲೆಯಿಂದ ಬಹಳ ದೂರವಿದೆ. ಪ್ರತಿನಿತ್ಯ ಆತ ಒಂದು ಗಂಟೆ ನಡೆದುಕೊಂಡೇ ಶಾಲೆಗೆ ಬರ್ತಾನಂತೆ. ಮನೆಯಲ್ಲಿ ಕಡು ಬಡತನವಿದ್ದಿದ್ರಿಂದ ಬೆಚ್ಚನೆಯ ಜಾಕೆಟ್, ಉಣ್ಣೆಯ ಗ್ಲೌಸ್ ಗಳನ್ನೆಲ್ಲ ಕೊಳ್ಳಲು ಸಾಧ್ಯವಾಗಿಲ್ಲ.

ವಾಂಗ್ ಬಳಿ ಇದ್ದಿದ್ದು ತೆಳುವಾದ ಒಂದು ಜಾಕೆಟ್. ಅದನ್ನೇ ಧರಿಸಿ ಶಾಲೆಗೆ ಬಂದಿದ್ದ. ಆದ್ರೆ ಅಷ್ಟು ದೂರ ಚಳಿಯಲ್ಲಿ ನಡೆದಿದ್ದರಿಂದ ಅವನೇ ಫ್ರೀಝ್ ಆಗಿಬಿಟ್ಟಿದ್ದ. ಬಾಲಕನ ಫೋಟೋವನ್ನು ಮುಖ್ಯಶಿಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...