alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮದಲ್ಲಿ 100 ವರ್ಷ ಬದುಕಿರ್ತಾರೆ ಮನುಷ್ಯರು

ಜೀವನ ಶೈಲಿಯಲ್ಲಾಗ್ತಿರುವ ಬದಲಾವಣೆ ಜೀವಿತಾವಧಿ ಮೇಲೆ ಪರಿಣಾಮ ಬೀರ್ತಿದೆ. ಮನುಷ್ಯನ ಆಯಸ್ಸು ನಿಧಾನವಾಗಿ ಕಡಿಮೆಯಾಗ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಆ ಗ್ರಾಮ ಮಾತ್ರ ಭಿನ್ನವಾಗಿದೆ. ಅಲ್ಲಿಯ ನಿವಾಸಿಗಳ ಸರಾಸರಿ ವಯಸ್ಸು 90-100 ವರ್ಷ. ಯಸ್, ಅವ್ರು ಹೇಗೆ ಇಷ್ಟು ವರ್ಷ ಬದುಕುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ.

2017ರಲ್ಲಿ ನಡೆದ ಸಂಶೋಧನೆಯೊಂದರಲ್ಲಿ ಇಟಲಿಯ ಸಿಲೆಂಟೊ ಗ್ರಾಮದ ಜನರು ಹೇಗೆ 90-100 ವರ್ಷ ಬದುಕುತ್ತಾರೆ ಎಂಬುದು ಬಹಿರಂಗವಾಗಿದೆ. ಅವರಲ್ಲಿರುವ ಛಲ ಹಾಗೂ ಮತ್ತೆ ಎದ್ದು ನಿಲ್ಲುವ ಆತ್ಮವಿಶ್ವಾಸವೇ ಇದಕ್ಕೆಲ್ಲ ಕಾರಣ ಎಂದು ಸಂಶೋಧನೆ ಹೇಳಿದೆ.

ಸಿಲೆಂಟೊದಲ್ಲಿರುವ 90 ವರ್ಷ ಮೇಲ್ಪಟ್ಟ ಜನರನ್ನು ಸಂಶೋಧಕರು ಮಾತನಾಡಿಸಿದ್ದಾರೆ. ಅವ್ರ ದೈನಂದಿನ ಕೆಲಸ ಅವ್ರಿಗೆ ಜೀವನೋತ್ಸಾಹ ನೀಡುತ್ತದೆ. ವಯಸ್ಸಾದ್ರೂ ದಿನನಿತ್ಯದ ಕೆಲಸವನ್ನು ವೃದ್ಧರೇ ಮಾಡಿಕೊಳ್ತಾರೆ. ಚಿಕ್ಕ ವಯಸ್ಸಿನವರಿಗೆ ಹೋಲಿಸಿದ್ರೆ ದೈಹಿಕವಾಗಿ ಅವ್ರ ಬಲ ಕಡಿಮೆಯಿದೆ. ಆದ್ರೆ ಮಾನಸಿಕವಾಗಿ, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಅವರು ಕಿರಿಯರನ್ನು ಹಿಂದಿಕ್ಕಿದ್ದಾರೆ ಎಂದು ಸಂಶೋಧನೆ ಹೇಳಿದೆ.

ಅವ್ರ ಆಹಾರ ಕೂಡ ಅವ್ರ ಗಟ್ಟಿತನದ ಗುಟ್ಟಾಗಿದೆ. ಹೆಚ್ಚು ವೃದ್ಧರೇ ಇರುವ ಈ ಹಳ್ಳಿಯನ್ನು ವೃದ್ಧರಿಗೆ ಯೋಗ್ಯವಾದ ಸ್ಥಳ ಎನ್ನಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...