alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ಚಿತ್ರದಿಂದ ಹಾಳಾಯ್ತು ಮೊದಲ ಸೆಕ್ಸ್….

ಸಿನಿಮಾದಲ್ಲಿ ತೋರಿಸುವುದೆಲ್ಲ ಸತ್ಯವಲ್ಲ. ಹಾಗೆ ಪೋರ್ನ್ ಚಿತ್ರಗಳಲ್ಲಿ ತೋರಿಸುವುದು ಕೂಡ ಸತ್ಯವಲ್ಲ. ಕೆಲವರು ಲೈಂಗಿಕ ಜೀವನದ ಸುಖ ಅನುಭವಿಸುವ ಮುನ್ನ ಪೋರ್ನ್ ಚಿತ್ರಗಳನ್ನು ನೋಡಿ ಅಲ್ಲಿ ತೋರಿಸುವುದೆಲ್ಲ ಸತ್ಯವೆಂದು ನಂಬುತ್ತಾರೆ. ಮೊದಲ ಅನುಭವದ ವೇಳೆ ಗೊಂದಲಕ್ಕೆ ಬೀಳ್ತಾರೆ. ಇದನ್ನು ಕೆಲ ದಂಪತಿ ಒಪ್ಪಿಕೊಂಡಿದ್ದಾರೆ ಕೂಡ. ಪೋರ್ನ್ ನೋಡಿ ನಂತ್ರ ಸಂಭೋಗ ನಡೆಸಲು ಯತ್ನಿಸಿದ ಅನೇಕ ದಂಪತಿ ಮೊದಲ ನೈಟ್ ಏನೂ ಇಲ್ಲದೆ ಹಾಳಾಯ್ತಂತೆ.

ಪೋರ್ನ್ ಚಿತ್ರಗಳಲ್ಲಿ ಮಹಿಳೆಯರು ಕೆಲವೇ ನಿಮಿಷಗಳಲ್ಲಿ ಪರಾಕಾಷ್ಠೆ ತಲುಪಿದಂತೆ ತೋರಿಸುತ್ತಾರೆ. ಆದ್ರೆ ಇದು ಸತ್ಯವಲ್ಲ. ವಾಸ್ತವದಲ್ಲಿ ಮಹಿಳೆಯರು ಪರಾಕಾಷ್ಠೆ ತಲುಪುವುದು ತುಂಬಾ ಕಷ್ಟ. ಅನೇಕ ಬಾರಿ ಮಹಿಳೆಯರು ಪರಾಕಾಷ್ಠೆ ತಲುಪುವುದಿಲ್ಲ.

ಪೋರ್ನ್ ಚಿತ್ರಗಳಲ್ಲಿ ಪುರುಷರು ಮಹಿಳೆಯನ್ನು ಕಚಗುಳಿಯಿಟ್ಟು ಉತ್ತೇಜಿಸುತ್ತಾರೆ. ವಾಸ್ತವವಾಗಿಯೂ ಇದಾಗಬೇಕೆಂದೇನೂ ಇಲ್ಲ. ಅನೇಕ ಬಾರಿ ಸಂಭೋಗದ ವೇಳೆ ಕಚಗುಳಿ ಮಹಿಳೆಯರ ಕೋಪಕ್ಕೆ ಕಾರಣವಾಗಬಹುದು. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ದಂಪತಿ ಮೊದಲ ಸೆಕ್ಸ್ ಡೇ ಹಾಳಾಗಲು ಇದು ಕಾರಣ ಎಂದಿದ್ದಾರೆ.

ಪೋರ್ನ್ ಚಿತ್ರದ ಜೊತೆ ಸಂಗಾತಿಯ ಕಂಪೇರ್ ಮಾಡುವುದು ಸರಿಯಲ್ಲ. ಅಲ್ಲಿನ ಕಲಾವಿದರ ದೇಹ ಯಾವಾಗಲೂ ಪರ್ಫೆಕ್ಟ್ ಆಗಿರುತ್ತದೆ. ಆದ್ರೆ ವಾಸ್ತವದಲ್ಲಿ ಸಂಗಾತಿ ಹೊಟ್ಟೆ ದೊಡ್ಡದಾಗಿ ಕಾಣಬಹುದು, ಇಲ್ಲ ಸ್ತನ ಸರಿಯಾಗಿಲ್ಲದಿರಬಹುದು, ಇಲ್ಲ ಖಾಸಗಿ ಅಂಗದ ಗಾತ್ರ ಚಿಕ್ಕದಿರಬಹುದು. ಮೊದಲ ಸೆಕ್ಸ್ ವೇಳೆ ಇದನ್ನು ದಂಪತಿ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಸೆಕ್ಸ್ ವೇಳೆ ಮಹಿಳೆ ಧ್ವನಿ ಹೊರಡಿಸಬೇಕೆಂದು ನಿಯಮವಿಲ್ಲ. ಧ್ವನಿ ಹೊರಡಿಸದ ಸಂಗಾತಿಗೆ ಲೈಂಗಿಕ ಸುಖ ಸಿಕ್ಕಿಲ್ಲವೆಂದು ಅರ್ಥವಲ್ಲ.

ಪೋರ್ನ್ ಚಿತ್ರಗಳಲ್ಲಿ ಕಷ್ಟದ ಸೆಕ್ಸ್ ಭಂಗಿಗಳನ್ನು ಸುಲಭವಾಗಿ ತೋರಿಸುತ್ತಾರೆ. ಆದ್ರೆ ವಾಸ್ತವದಲ್ಲಿ ಇದು ಸುಲಭವಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...