alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ..! ಭ್ರೂಣ ಲಿಂಗ ಪತ್ತೆಗೆ ಬಂದಿದೆ ಚೀನಾದ ಕಿಟ್

ನಮ್ಮಲ್ಲಿ ಭ್ರೂಣ ಲಿಂಗ ಪತ್ತೆ ಮಾಡಲಾಗುವುದಿಲ್ಲ ಎಂಬ ಬೋರ್ಡ್ ಎಲ್ಲ ಆಸ್ಪತ್ರೆಗಳಲ್ಲಿ, ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ರಾರಾಜಿಸುತ್ತಿರುತ್ತದೆ. ಆದ್ರೆ ಕೆಲ ಆಸ್ಪತ್ರೆಗಳಲ್ಲಿ ಹಣದ ಮುಂದೆ ಬೋರ್ಡ್ ಮರೆತು ಹೋಗುತ್ತದೆ. ಅಲ್ಟ್ರಾ ಸೌಂಡ್ ಮೂಲಕ ಭ್ರೂಣ ಲಿಂಗ ಪರೀಕ್ಷೆ ನಡೆಯುತ್ತದೆ. ಆದ್ರೀಗ ಹೆಣ್ಣು ಭ್ರೂಣ ಹತ್ಯೆಗೆ ಚೀನಾ ಕಾರಣವಾಗ್ತಿದೆ. ಚೀನಾದ ಭ್ರೂಣ ಲಿಂಗ ಪತ್ತೆ ಕಿಟ್ ಮಾರುಕಟ್ಟೆಗೆ ಕಾಲಿಟ್ಟಿದೆ.

ಚೀನಾದ ಈ ಕಿಟ್ ರಕ್ತದ ಮೂಲಕ ಲಿಂಗ ಪತ್ತೆ ಮಾಡುತ್ತದೆ. ಚೀನಾದಲ್ಲಿ ಈ ಕಿಟ್ ಗೆ ನಿಷೇಧ ಹೇರಲಾಗಿದೆ. ಆದ್ರೆ ಭಾರತ ಮಾರುಕಟ್ಟೆಯಲ್ಲಿ ಇದ್ರ ಮಾರಾಟ ಜೋರಾಗಿ ನಡೆಯುತ್ತಿದೆ. ಹರ್ಯಾಣ ಸೇರಿದಂತೆ ದೇಶದ ನಾನಾ ಕಡೆ ಈ ಕಿಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. 2017 ಏಪ್ರಿಲ್ ತಿಂಗಳಿನಿಂದಲೇ ಭಾರತ ಮಾರುಕಟ್ಟೆಯಲ್ಲಿ ಚೀನಾ ಕಿಟ್ ಅಬ್ಬರ ಜೋರಾಗಿ ನಡೆಯುತ್ತಿದೆ. ಗರ್ಭಿಣಿ ರಕ್ತ ಪರೀಕ್ಷೆ ಮೂಲಕ ಭ್ರೂಣದ ಲಿಂಗ ಪತ್ತೆ ಮಾಡುವ ಕಿಟ್ ಇದಾಗಿದೆ.

ಎರಡು ಹನಿ ರಕ್ತದ ಮೂಲಕ ಹೊಟ್ಟೆಯಲ್ಲಿರುವ ಮಗು ಯಾವುದು ಎಂಬುದನ್ನು ಕಿಟ್ ತಿಳಿಸುತ್ತದೆ. ಇದ್ರಿಂದಾಗಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ನಿಧಾನವಾಗಿ ಹೆಚ್ಚಾಗ್ತಿದೆ. ಹರ್ಯಾಣ ಒಂದರಲ್ಲಿಯೇ 80 ಪ್ರಕರಣ ಬೆಳಕಿಗೆ ಬಂದಿದ್ದು, 10 ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಿಟ್ ಮೇಲೆ ನಿಷೇಧ ಹೇರಬೇಕೆಂದು ವೈದ್ಯರೊಬ್ಬರು ಒತ್ತಾಯಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...