alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ…! ಈ ಸಮಸ್ಯೆಗೆ ಕಾರಣವಾಗುತ್ತೆ ಸಂಭೋಗ

ಮೂತ್ರ ನಾಳದ ಸೋಂಕು ಯುಟಿಐ ಸಾಮಾನ್ಯ ಸಮಸ್ಯೆ. ಪುರುಷರಿಗಿಂತ ಮಹಿಳೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸೋಂಕಿಗೆ ಸಂಬಂಧಿಸಿದಂತೆ ಸಂಶೋಧನೆಯೊಂದು ನಡೆದಿದ್ದು, ಅದ್ರಲ್ಲಿ ಆಶ್ಚರ್ಯಕಾರಿ ಸಂಗತಿಗಳು ಹೊರ ಬಿದ್ದಿವೆ.

ಸಂಭೋಗದ ಮರುದಿನ ಪದೇ ಪದೇ ಮೂತ್ರ ವಿಸರ್ಜನೆ ಹೋಗ್ತಿದ್ದರೆ ನಿಮಗೆ ಸೋಂಕು ತಗಲಿದೆ ಎಂದರ್ಥ. ಸಂಶೋಧನೆ ಪ್ರಕಾರ ಸೆಕ್ಸ್ ಯುಟಿಐಗೆ ಬಹುಮುಖ್ಯ ಕಾರಣವಂತೆ. ಶೇಕಡಾ 50 ಕ್ಕೂ ಹೆಚ್ಚು ಮಂದಿ ಜೀವನದಲ್ಲಿ ಒಂದಲ್ಲ ಒಂದು ಬಾರಿ ಸಂಭೋಗದ ಕಾರಣ ಸೋಂಕಿಗೆ ತುತ್ತಾಗುತ್ತಾರೆಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಸೆಕ್ಸ್ ನಂತ್ರ ಯಟಿಐ ಕಾಣಿಸಿಕೊಂಡ್ರೆ ನೋವು, ತುರಿಕೆ, ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ನಾರ್ತ್ ವೆಸ್ಟರ್ನ್ ಯುನಿವರ್ಸಿಟಿಯ ಸ್ತ್ರೀರೋಗತಜ್ಞ, ಪ್ರಾಧ್ಯಾಪಕ ಡಾ ಲಾರೆನ್ ಪ್ರಕಾರ, ಯಾರಿಗೆ ಬೇಕಾದ್ರೂ ಈ ಸೋಂಕು ಬರುತ್ತದೆಯಂತೆ. ಪುರುಷ, ಮಹಿಳೆ ಎಂಬ ಬೇಧವಿಲ್ಲ. ಆದ್ರೆ ಮಹಿಳೆಯರಿಗೆ ಹೆಚ್ಚು ಎನ್ನುತ್ತಾರೆ.

ಸೆಕ್ಸ್ ನಂತ್ರ ಸ್ವಚ್ಛತೆ ಮಾಡಿಕೊಳ್ಳದೆ ಹೋದಲ್ಲಿ ಇದು ಹೆಚ್ಚಿನ ಸಮಸ್ಯೆಗೆ ಕಾರಣವಾಗುತ್ತದೆ. ಮೂತ್ರಪಿಂಡ ಹಾಗೂ ದೇಹದ ಇತರ ಭಾಗಗಳಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.ಯಟಿಐ ಸೋಂಕು ತಡೆಯಲು ಮಾತ್ರೆ, ಔಷಧಿಗಳಿವೆ. ಆದ್ರೆ ಈ ಸೋಂಕಿರುವಾಗ ಒಂದು ವಾರದವರೆಗೆ ಸೆಕ್ಸ್ ನಿಂದ ದೂರವಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...