alex Certify ಮನೆ ಕೆಲಸದಲ್ಲಿ ʼಸಂಗಾತಿʼಗೆ ನೆರವಾಗುವ ಪುರುಷ ಯಾಕೆ ಇಷ್ಟವಾಗ್ತಾನೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಕೆಲಸದಲ್ಲಿ ʼಸಂಗಾತಿʼಗೆ ನೆರವಾಗುವ ಪುರುಷ ಯಾಕೆ ಇಷ್ಟವಾಗ್ತಾನೆ ಗೊತ್ತಾ….?

ಮನೆಯ ಕೆಲಸದಲ್ಲಿ ನಿಮ್ಮ ಸಂಗಾತಿಗೆ ನೀವು ನೆರವಾಗ್ತೀರಾ? ನಿಮ್ಮ ಉತ್ತರ ಇಲ್ಲ ಎಂದಾದಲ್ಲಿ ಇಂದಿನಿಂದಲೇ ಮನೆ ಕೆಲಸದಲ್ಲಿ ಸಹಾಯ ಮಾಡಲು ಶುರು ಮಾಡಿ.

ಸಮೀಕ್ಷೆಯೊಂದು ಮನೆ ಕೆಲಸಕ್ಕೆ ನೆರವಾಗುವ ಪುರುಷ, ಮಹಿಳೆಯರಿಗೆ ಹೆಚ್ಚು ಇಷ್ಟವಾಗ್ತಾನೆ ಎಂಬುದನ್ನು ಹೇಳಿದೆ. ಅಡುಗೆಗೆ ನೆರವಾಗದ ಪುರುಷನ ಜೊತೆ ಮಹಿಳೆ ಜಗಳಕ್ಕಿಳಿಯುವ ಪ್ರಮಾಣ ಜಾಸ್ತಿ. ಹಾಗೆ ಸಂಬಂಧ ನಿಧಾನವಾಗಿ ಹದಗೆಡುತ್ತದೆ ಎಂದು ಸಮೀಕ್ಷೆ ಹೇಳಿದೆ.

ಸಂಶೋಧಕರ ಪ್ರಕಾರ, ಮನೆ ಕೆಲಸದಲ್ಲಿ ಸಂಗಾತಿಗೆ ನೆರವಾಗುವುದರಿಂದ ಸಂಬಂಧ ಗಟ್ಟಿಯಾಗುತ್ತದೆ. ಸಂಬಂಧದಲ್ಲಿ ಸ್ಥಿರತೆ ಹಾಗೂ ತೃಪ್ತಿ ಕಾಣಬಹುದು. ಯಾರು ಮನೆಯ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೋ ಅವರು ಸಂತೋಷವಾಗಿರುವುದಿಲ್ಲ. ವಿಚ್ಛೇದನ ಪಡೆಯುವ ಸಾಧ್ಯತೆಯೂ ಹೆಚ್ಚಿರುತ್ತದೆ.

ಸಂಶೋಧಕರ ಪ್ರಕಾರ ಈಗಿನ ಪರಿಸ್ಥಿತಿ ಮೊದಲಿನಂತಿಲ್ಲ. ಈಗ ಕೇವಲ ಪುರುಷ ಮಾತ್ರವಲ್ಲ ಮಹಿಳೆ ಕೂಡ ಕೆಲಸಕ್ಕೆ ಹೋಗ್ತಾಳೆ. ಮಕ್ಕಳನ್ನು ಸಂಭಾಳಿಸ್ತಾಳೆ. ಕುಟುಂಬವನ್ನು ನೋಡಿಕೊಳ್ತಾಳೆ. ಇದ್ರಿಂದ ಆಕೆ ಒತ್ತಡಕ್ಕೊಳಗಾಗ್ತಾಳೆ. ಹಾಗಾಗಿ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.

ಹಾಗಾಗಿ ಮನೆ ಕೆಲಸದಲ್ಲಿ ಪುರುಷ ನೆರವಾಗುವುದು ಅಗತ್ಯವಾಗಿದೆ. ಮನೆ ಕೆಲಸ ಮಾಡಿದ ಪತಿಯಲ್ಲಿ ಕಾಳಜಿ ಹಾಗೂ ಪ್ರೀತಿ ಎರಡನ್ನೂ ಕಾಣ್ತಾಳೆ ಪತ್ನಿ. ಸಂಗಾತಿ ನೆರವಾಗಿಲ್ಲವೆಂದಾದಲ್ಲಿ ಪತ್ನಿಯಾದವಳು ಈ ಬಗ್ಗೆ ತಿಳಿಸಿ ಹೇಳುವ ಅಗತ್ಯವಿದೆ. ಹಾಗೆ ಕೆಲಸಕ್ಕೆ ನೆರವಾಗಿದ್ದರಿಂದ ಏನೆಲ್ಲ ಲಾಭವಾಯ್ತು ಎಂಬುದನ್ನು ಹೇಳಬೇಕಾಗುತ್ತದೆ.

ಪತಿ-ಪತ್ನಿ ಇಬ್ಬರೂ ಮನೆ ಕೆಲಸವನ್ನು ಒಟ್ಟಿಗೆ ಮಾಡಿದಲ್ಲಿ ಸಂಬಂಧ ಗಟ್ಟಿಯಾಗುತ್ತದೆ. ಜೊತೆಗೆ ಮನೆ ಮಂದಿ ಮಕ್ಕಳೆಲ್ಲ ಪ್ರೀತಿ, ಕಾಳಜಿ ಬಗ್ಗೆ ತಿಳಿದುಕೊಳ್ತಾರೆ. ಹಾಗೆ ಅವರು ನೆರವಿಗೆ ಬರ್ತಾರೆ. ಇದ್ರಿಂದ ಕುಟುಂಬದಲ್ಲಿ ಪ್ರೀತಿ ಮತ್ತಷ್ಟು ಹೆಚ್ಚಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...