alex Certify
ಕನ್ನಡ ದುನಿಯಾ       Mobile App
       

Kannada Duniya

ಮಗ ಸಾವನ್ನಪ್ಪಿ 2 ವರ್ಷಗಳ ನಂತ್ರ ಮೊಮ್ಮಕ್ಕಳನ್ನು ಪಡೆದ ಕುಟುಂಬ…!

ಎರಡು ವರ್ಷಗಳ ಹಿಂದೆ ಮೃತಪಟ್ಟ ಮಗನ ವೀರ್ಯದಿಂದ ತಂದೆ-ತಾಯಿ ಮೊಮ್ಮಗುವನ್ನು ಪಡೆದಿದ್ದಾರೆ. ಘಟನೆ ಪುಣಾದಲ್ಲಿ ನಡೆದಿದೆ. 27 ವರ್ಷದ ಯುವಕನಿಗೆ ಮೆದುಳಿನಲ್ಲಿ ಗಡ್ಡೆಯಾಗಿತ್ತು. ಇದನ್ನು ತಿಳಿದಿದ್ದ ತಂದೆ-ತಾಯಿ ಆತನ ವೀರ್ಯವನ್ನು ಸಂಗ್ರಹಿಸಿಟ್ಟಿದ್ದರು. ಮಗ ಸಾವನ್ನಪ್ಪಿ ಎರಡು ವರ್ಷಗಳ ನಂತ್ರ ವೀರ್ಯ ಬಳಸಿ ಬಾಡಿಗೆ ತಾಯಿಯಿಂದ ಮೊಮ್ಮಕ್ಕಳನ್ನು ಪಡೆದಿದ್ದಾರೆ. ಎರಡು ದಿನಗಳ ಹಿಂದೆ ಬಾಡಿಗೆ ತಾಯಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.

2013ರಲ್ಲಿ ಜರ್ಮನಿಯಲ್ಲಿ ಓದುತ್ತಿದ್ದ ಯುವಕನಿಗೆ ಮೆದುಳಿನಲ್ಲಿ ಗಡ್ಡೆಯಾಗಿದೆ ಎಂಬ ವಿಷ್ಯ ಗೊತ್ತಾಗಿದೆ. ಕಿಮೋಥೆರಪಿ ನಂತ್ರ ಜೀರ್ಣಕ್ರಿಯೆ ಕ್ಷೀಣಿಸುವುದ್ರಿಂದ ಅದಕ್ಕಿಂತ ಮೊದಲೇ ವೀರ್ಯವನ್ನು ವೈದ್ಯರು ತೆಗೆದಿಟ್ಟಿದ್ದರಂತೆ. ಮಗ ಬುದ್ಧಿವಂತನಾಗಿದ್ದನಂತೆ. 2014ರಲ್ಲಿ ಕಣ್ಣು ಕಳೆದುಕೊಂಡರೂ ಆತನ ಆತ್ಮವಿಶ್ವಾಸ ಕಡಿಮೆ ಆಗಿರಲಿಲ್ಲವಂತೆ. ಮಗನ ಸಾವಿನ ನಂತ್ರ ತಾಯಿ ಮೊಮ್ಮಕ್ಕಳನ್ನು ಪಡೆಯುವ ಆಸೆ ವ್ಯಕ್ತಪಡಿಸಿದ್ದಾಳೆ. ಜರ್ಮನಿಯಿಂದ ವೀರ್ಯ ತರಿಸಿಕೊಂಡು ಪುಣೆಯ ಆಸ್ಪತ್ರೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದಾಳೆ. ನಂತ್ರ ಮಹಿಳಾ ಡೋನರ್ ಹುಡುಕಾಟ ನಡೆದಿದೆ. ಕೊನೆಯಲ್ಲಿ ಬಾಡಿಗೆ ತಾಯಿ ಮೂಲಕ ಮೊಮ್ಮಕ್ಕಳು ಜನಿಸಿವೆ.

ಚೈನ್ನೈನಲ್ಲಿರುವ ಭಾರತೀಯ ಸರೋಗಸಿ ಲಾ ಸೆಂಟರ್ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಯುವಕನ ಸಾವಿಗೆ ಮುಂಚೆ ಆತನ ವೀರ್ಯವನ್ನು ಬಳಸಲು ಒಪ್ಪಿಗೆ ಪಡೆಯಬೇಕಿತ್ತು ಎನ್ನಲಾಗ್ತಿದೆ. ಈ ಬಗ್ಗೆ ಇನ್ನೂ ಚರ್ಚೆ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...