alex Certify
ಕನ್ನಡ ದುನಿಯಾ       Mobile App
       

Kannada Duniya

‘ಹೆತ್ತವರನ್ನೇ ನಿಂದಿಸುವ ಮಕ್ಕಳನ್ನು ಮನೆಯಿಂದ ಹೊರಹಾಕಿ’

dhl

ತಂದೆ-ತಾಯಿಯನ್ನು ದೂಷಿಸುವ ಮಕ್ಕಳನ್ನು ಮನೆಯಿಂದ ಹೊರಹಾಕಬಹುದು ಅಂತಾ ದೆಹಲಿ ಹೈಕೋರ್ಟ್ ಹೇಳಿದೆ. ಮನೆ ಅಥವಾ ಆಸ್ತಿಯ ಮೇಲೆ ಪೋಷಕರ ಹಕ್ಕು ಇದ್ದಂತಹ ಸಂದರ್ಭದಲ್ಲಿ ಅವರು ತಮ್ಮ ದುರುಳ ಮಕ್ಕಳನ್ನು ಹೊರಹಾಕಬಹುದು, ಅವರಿಗೆ ಆಸ್ತಿ ಕೊಡಬೇಕೆಂದೇನಿಲ್ಲ ಅಂತಾ ಜಸ್ಟಿಸ್ ಮನಮೋಹನ್ ತೀರ್ಪು ನೀಡಿದ್ದಾರೆ.

ಹಿರಿಯ ನಾಗರಿಕರು ಅಥವಾ ತಂದೆ-ತಾಯಿಗೆ ಶಾಂತಿ, ನೆಮ್ಮದಿ ಮತ್ತು ಗೌರವಯುತವಾಗಿ ಬದುಕಲು ಹಕ್ಕಿದೆ ಅಂತಾ ಅಭಿಪ್ರಾಯಪಟ್ಟಿದ್ದಾರೆ. ಮಾಜಿ ಪೊಲೀಸ್ ಹಾಗೂ ಆತನ ಸಹೋದರ ಹೆತ್ತವರು ತಮ್ಮನ್ನು ಮನೆಯಿಂದ ಹೊರಹಾಕಿದ್ದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಹೆತ್ತವರು ಮಾಡಿದ್ದು ಸರಿಯಾಗಿಯೇ ಇದೆ ಅಂತಾ ಹೇಳಿದೆ. ದೈಹಿಕ ಹಲ್ಲೆ, ದೌರ್ಜನ್ಯ ಮತ್ತು ಮಾನಸಿಕ ಕಿರುಕುಳದ ಹಿನ್ನೆಲೆಯಲ್ಲಿ ಪೋಷಕರು ಇಬ್ಬರನ್ನೂ ಮನೆಯಿಂದ ಹೊರಹಾಕಿದ್ದರು. ಆಸ್ತಿಯಲ್ಲೂ ಪಾಲು ಕೊಟ್ಟಿರಲಿಲ್ಲ. ಇದು ಕಾನೂನಿಗೆ ವಿರುದ್ಧ ಅಂತಾ ಆರೋಪಿಸಿ ಮಕ್ಕಳು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...