alex Certify
ಕನ್ನಡ ದುನಿಯಾ       Mobile App
       

Kannada Duniya

ಹೆತ್ತವರಿಗೂ ಬೇಡವಾದ ಮಕ್ಕಳಿಗೆ ಹೊಸ ಬದುಕು ಕೊಟ್ಟವರು….

parents

ಪುಣೆಗೆ ಬಂದಾಗ ಪ್ರದೀಪ್ ಗೆ ಇನ್ನೂ 11 ವರ್ಷ. ಇಬ್ಬರು ಪುಟ್ಟ ಸಹೋದರಿಯರು ಕೂಡ ಜೊತೆಗಿದ್ರು. ಒಳ್ಳೆ ಶಿಕ್ಷಣ ಸಿಗಲಿ ಅನ್ನೋ ಕಾರಣಕ್ಕೆ ಪುಣೆಗೆ ಕರೆತರಲಾಗಿದೆ ಅನ್ನೋದಷ್ಟೆ ಆ ಮೂವರಿಗೆ ಗೊತ್ತಿದ್ದ ವಿಷಯ.

ಯಾಕಂದ್ರೆ ಹೆತ್ತವರು ರೈಲು ನಿಲ್ದಾಣದಲ್ಲಿ ಇವರನ್ನು ಬಿಟ್ಟು ನಾಪತ್ತೆಯಾಗಿದ್ರು. ಈ ಮಕ್ಕಳ ತಂದೆ ಆಟೋ ರಿಕ್ಷಾ ಚಾಲಕ, ಆಗಾಗ ಗದ್ದೆ ಕೆಲಸಕ್ಕೂ ಹೋಗುತ್ತಿದ್ದ. ಬೇರೆ ಕೆಲಸ ಹುಡುಕಿಕೊಂಡು ನಿಮಗೆ ಒಳ್ಳೆಯ ಶಿಕ್ಷಣ ಕೊಡಿಸ್ತೀನಿ ಅಂತಾ ಎಲ್ಲರನ್ನೂ ಪುಣೆಗೆ ಕರೆತಂದಿದ್ದ. ರೈಲು ನಿಲ್ದಾಣಕ್ಕೆ ಬರ್ತಿದ್ದಂತೆ ಉಳಿದುಕೊಳ್ಳಲು ಜಾಗ ಹುಡುಕಿಕೊಂಡು ಬರುವುದಾಗಿ ಹೇಳಿ ಹೋಗಿದ್ದ ತಂದೆ- ತಾಯಿ ವಾಪಸ್ ಬರಲೇ ಇಲ್ಲ.

ಇಬ್ಬರು ತಂಗಿಯರ ಜವಾಬ್ಧಾರಿಯೂ ಪ್ರದೀಪ್ ಮೇಲಿತ್ತು. ಆತ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುವುದು, ಪ್ಲಾಟ್ ಫಾರ್ಮ್ ಸ್ವಚ್ಛಗೊಳಿಸುವುದು ಮಾಡುತ್ತಿದ್ದ. ಭಿಕ್ಷೆ ಬೇಡುವ ಸಂದರ್ಭದಲ್ಲಿ ಎಷ್ಟೋ ಜನರಿಂದ ಪುಟ್ಟ ಜೀವ ಹೊಡೆತ ತಿಂದಿದೆ. ಆದ್ರೆ ಈಗ ಪ್ರದೀಪ್ ಬದುಕು ಬದಲಾಗಿದೆ. ಆತ ಭಿಕ್ಷೆ ಬೇಡಿ ತಂದ ಆಹಾರವನ್ನು ಇಬ್ಬರು ತಂಗಿಯರ ಜೊತೆ ಹಂಚಿಕೊಂಡು ತಿನ್ನುವುದನ್ನು ನೋಡಿದ ಪೊಲೀಸ್ ಇನ್ಸ್ ಪೆಕ್ಟರ್ ರಾಜೇಂದ್ರ ವಿಭಾಂಡಿಕ್ ಅವರನ್ನು ಠಾಣೆಗೆ ಕರೆದೊಯ್ದರು.

ಮೂವರಿಗೂ ಹೊಟ್ಟೆ ತುಂಬಾ ಊಟ ಕೊಟ್ರು. ಹೇಗೋ ಕಷ್ಟಪಟ್ಟು ಈ ಮಕ್ಕಳ ತಂದೆ- ತಾಯಿಯನ್ನು ಇನ್ಸ್ ಪೆಕ್ಟರ್ ರಾಜೇಂದ್ರ ಪತ್ತೆ ಮಾಡಿದ್ದಾರೆ. ಅವರಿಬ್ರೂ ಪುಣೆಯಲ್ಲೇ ಇದ್ದಾರೆ, ಆದ್ರೆ ಜೊತೆಯಾಗಿಲ್ಲ. ತಂದೆ ಕುಡಿದ ಅಮಲಲ್ಲಿ ಬದುಕು ದೂಡ್ತಾ ಇದ್ರೆ, ತಾಯಿ ಬೇರೊಬ್ಬನ ಸಂಗ ಮಾಡಿಕೊಂಡಿದ್ದಾಳೆ. ಇಬ್ಬರಿಗೂ ಮಕ್ಕಳು ಬೇಡವಾಗಿದ್ದಾರೆ. ಹಾಗಾಗಿ ಇನ್ಸ್ ಪೆಕ್ಟರ್ ರಾಜೇಂದ್ರ ಸಾಮಾಜಿಕ ಕಾರ್ಯಕರ್ತರೊಬ್ಬರ ನೆರವಿನಿಂದ ಮಕ್ಕಳಿಗೆ ಆಸರೆ ಹಾಗೂ ಶಿಕ್ಷಣದ ವ್ಯವಸ್ಥೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...