alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಕ್ಕಿನ ಮೂತ್ರದ ಉಪಯೋಗ ಏನು ಗೊತ್ತಾ?

Cat (1)ಲಂಡನ್: ಒಂದು ಹೊಸ ಅಧ್ಯಯನದ ಪ್ರಕಾರ, ಬೆಕ್ಕಿನ ಮೂತ್ರಕ್ಕೆ ಅಂಡಾಶಯದ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಇದೆ ಎಂಬುದು ತಿಳಿದುಬಂದಿದೆ.

ಅಮೆರಿಕದ ವಿಜ್ಞಾನಿಗಳು, ಬೆಕ್ಕಿನ ಮೂತ್ರದಲ್ಲಿ ಮತ್ತು ಕೊಳಕು ಮಾಂಸದಲ್ಲಿ ಮಾತ್ರ ಇರುವ ಟೊಕ್ಸೊಪ್ಲಾಸ್ಮಾ ಗೊನ್ಡಿಲಿ (Toxoplasma Gondili) ಎಂಬ ಹೆಸರಿನ ಪರೋಪಕಾರಿ ಜೀವಿ ಕ್ಯಾನ್ಸರ್ ಗಡ್ಡೆಗಳನ್ನು ನಾಶಪಡಿಸಲು ಉಪಯೋಗವಾಗುತ್ತದೆ ಎಂದು ಹೇಳಿದ್ದಾರೆ.

ಈ ಜೀವಿ ಗರ್ಭದಲ್ಲಿರುವ ಮಗುವಿಗೆ ಹಾಗೂ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಕುಂಠಿತ ಇರುವವರಿಗೆ ಒಳ್ಳೆಯದಲ್ಲ. ಇದರಿಂದ ಪ್ರಾಣಾಪಾಯ ಹೆಚ್ಚು. ಟೊಕ್ಸೊಪ್ಲಾಸ್ಮಾ ಜೀವಿಯಲ್ಲಿ ಉತ್ಪತ್ತಿಯಾಗುವ ಪ್ರೊಟೀನ್ ಅನ್ನು ಇಲಿಯ ಮೇಲೆ ಪ್ರಯೋಗ ಮಾಡಿದಾಗ ಯಶಸ್ಸು ದೊರೆತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಟೊಕ್ಸೊಪ್ಲಾಸ್ಮಾ ಗೊನ್ಡಿಲಿಯನ್ನು ಕ್ಯಾನ್ಸರ್ ವಿರುದ್ಧ ಹೋರಾಡಲು ಒಂದು ದೊಡ್ಡ ಅಸ್ತ್ರವಾಗಿ ಬಳಸಿಕೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...