alex Certify
ಕನ್ನಡ ದುನಿಯಾ       Mobile App
       

Kannada Duniya

ಕಾನ್ಕಾರ್ಡಿಯಾ ಏರಲು ಹೊರಟಿದ್ದಾಳೆ ಈ ಸೈಕ್ಲಿಸ್ಟ್

Samar-Khanಇತ್ತೀಚೆಗೆ ಸಾಹಸಿಗರ ಸಂಖ್ಯೆ ಹೆಚ್ಚುತ್ತಿದೆ. ಮಹಿಳೆಯರು ಕೂಡ ಪುರುಷರಿಗೆ ಸಮನಾಗಿ ಬೈಕ್ ರೈಡಿಂಗ್, ಪರ್ವತಾರೋಹಣ, ಸೈಕ್ಲಿಂಗ್ ಮುಂತಾದ ಸಾಹಸ ಕಾರ್ಯಗಳಲ್ಲಿ ಹೆಸರು ಮಾಡುತ್ತಿದ್ದಾರೆ.

ಪಾಕಿಸ್ತಾನದ ಯುವ ಸೈಕ್ಲಿಸ್ಟ್ ಸಮರ್ ಖಾನ್ ಕೂಡ ಇಂತಹುದೇ ಒಂದು ಸಾಹಸಕ್ಕೆ ಕೈ ಹಾಕಿದ್ದಾಳೆ. ಇವಳಿಗೆ ಸೈಕ್ಲಿಂಗ್ ಎಂದರೆ ತುಂಬ ಇಷ್ಟ. ಕಡಿದಾದ ಪ್ರದೇಶಗಳಲ್ಲಿ ಸೈಕ್ಲಿಂಗ್ ಮಾಡುವಲ್ಲಿ ಇವಳದ್ದು ಎತ್ತಿದ ಕೈ. ಈಗ ಇವಳು ತನ್ನ ಹೆಸರನ್ನು ಇತಿಹಾಸದ ಪುಟಗಳಲ್ಲಿ ಬರೆಯಹೊರಟಿದ್ದಾಳೆ.

ಸಮರ್ ಖಾನ್ ಗೆ ತಾನು ಜಗತ್ತಿನ ಅತೀ ಎತ್ತರದ ಶ್ರೇಣಿಗಳಲ್ಲಿ ಒಂದಾದ ಗೆಲ್ಶಿಯರ್ ಮತ್ತು ಕಾನ್ಕಾರ್ಡಿಯಾವನ್ನು ಸೈಕಲ್ ಮೂಲಕ ಏರಿದ ಪ್ರಥಮ ಮಹಿಳೆಯಾಗಬೇಕೆಂಬ ಆಸೆ ಇದೆ.

ಜಗತ್ತಿನಲ್ಲಿರುವ 14 ಪರ್ವತ ಶ್ರೇಣಿಗಳು ಸಮುದ್ರ ಮಟ್ಟದಿಂದ 8000 ಮೀಟರ್ ಎತ್ತರದಲ್ಲಿವೆ. ಈ ಪೈಕಿ 4 ಪರ್ವತಗಳು ಕಾನ್ಕಾರ್ಡಿಯಾದಲ್ಲೇ ಇದೆ. ಇಂತಹ ದುರ್ಗಮವಾದ ಪರ್ವತ ಶ್ರೇಣಿಗಳನ್ನು ಏರಲು ಸಮರ್ ಖಾನ್ ಸಿದ್ಧಳಾಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...