alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹವಾಗಿ ವಂಚಿಸಿದವನಿಗೆ ಬುದ್ದಿ ಕಲಿಸಿದ್ಲು ಮಹಿಳೆ

mariyam-khaliqಉನ್ನತ ವ್ಯಾಸಂಗಕ್ಕೆ ಲಂಡನ್ ಗೆ ತೆರಳಿದ್ದ ಕೇರಳದ ಯುವಕನೊಬ್ಬ ಅಲ್ಲಿ ಪಾಕಿಸ್ತಾನ ಮೂಲದ ಬ್ರಿಟಿಷ್ ಮಹಿಳೆಯನ್ನು ವಿವಾಹವಾಗಿದ್ದು, ಬಳಿಕ ಆಕೆಗೆ ಕೈಕೊಟ್ಟು ಭಾರತದಲ್ಲಿ ಮತ್ತೊಂದು ಮದುವೆಯಾಗಿದ್ದರೂ ಪಟ್ಟು ಬಿಡದ ಬ್ರಿಟನ್ ಮಹಿಳೆ ಕೊನೆಗೂ ಆತನಿಗೆ ತಕ್ಕ ಪಾಠ ಕಲಿಸಿರುವ ಘಟನೆ ನಡೆದಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ನೌಷಾದ್ ಹುಸೇನ್ ಎಂಬಿಎ ವ್ಯಾಸಂಗ ಮಾಡಲು ಲಂಡನ್ ಗೆ ತೆರಳಿದ್ದು, ಅಲ್ಲಿ ಪಾಕಿಸ್ತಾನ ಮೂಲದ ಬ್ರಿಟಿಷ್ ಪ್ರಜೆ ಮರಿಯಂ ಖಾಲಿಕ್ ಎಂಬಾಕೆಯನ್ನು 2013 ರ ಏಪ್ರಿಲ್ ನಲ್ಲಿ ವಿವಾಹವಾಗಿದ್ದ. ತನ್ನ ಪದವಿ ಮುಗಿಯುತ್ತಿದ್ದಂತೆಯೇ ಬಾರತಕ್ಕೆ ಮರಳಲು ಸಿದ್ದನಾದ ಆತ ತನ್ನ ಪೋಷಕರ ಒಪ್ಪಿಗೆ ಪಡೆದು ಕೇರಳದಲ್ಲಿ ಮತ್ತೊಮ್ಮೆ ವಿವಾಹವಾಗುವುದಾಗಿ ಭರವಸೆ ನೀಡಿದ್ದ.

ಇದನ್ನು ಮರಿಯಂ ಕೂಡಾ ನಂಬಿದ್ದು, ಆರಂಭದಲ್ಲಿ ಆಕೆಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ನೌಷಾದ್ ಹುಸೇನ್, ಬಳಿಕ ತಮ್ಮ ವಿವಾಹಕ್ಕೆ ಪೋಷಕರು ಒಪ್ಪುತ್ತಿಲ್ಲವೆಂಬ ಕಾರಣವೇಳಿ ಮರಿಯಂ ಜೊತೆಗಿನ ಮಾತುಕತೆಯನ್ನು ನಿಲ್ಲಿಸಿದ್ದ. ನೌಷಾದ್ ವಾಸಸ್ಥಳದ ಕುರಿತು ಮರಿಯಂ ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ ಆತನ ಪತ್ತೆಗೆ ಪಣತೊಟ್ಟ ಮರಿಯಂ 2015 ರಲ್ಲಿ ಭಾರತಕ್ಕೆ ಬಂದಿದ್ದಳು. ತನ್ನ ವಿವಾಹಕ್ಕೆ ಸಾಕ್ಷಿಯಾಗಿ ಫೋಟೋಗಳನ್ನು ತಂದಿದ್ದ ಆಕೆ, ಮಲಪ್ಪುರಂ ಪೊಲೀಸರಿಗೆ ದೂರು ನೀಡಿದ್ದರೂ ಆಕೆಯ ಪಾಕಿಸ್ತಾನಿ ಹಿನ್ನಲೆಯ ಕಾರಣಕ್ಕೆ ಪೊಲೀಸರು ನಿರಾಸಕ್ತಿ ವಹಿಸಿದ್ದರು.

ಆಗ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯೊಂದರ ಮೊರೆ ಹೋದ ಮರಿಯಂ, ಕಡೆಗೂ ನೌಷಾದ್ ನನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದು, ಆಗ ನೌಷಾದ್ ಮತ್ತೊಂದು ವಿವಾಹವಾಗಲು ತಯಾರಿ ನಡೆಸುತ್ತಿರುವ ಅಂಶ ತಿಳಿದುಬಂದಿತ್ತು. ಮರಿಯಂ ಕುಣಕಲಂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ನೌಷಾದ್ ಹುಸೇನ್ ಮನೆಯಲ್ಲಿ ನೆಲೆಸಲು ಅನುಮತಿಯನ್ನೂ ಪಡೆದಿದ್ದಳು. ಈ ವೇಳೆ ಆಕೆ ಸಾಕಷ್ಟು ಕಿರುಕುಳವನ್ನು ಎದುರಿಸಬೇಕಾಗಿ ಬಂದಿತ್ತು. ನೌಷಾದ್ ಕುಟುಂಬದವರು ಆಕೆ ಪಾಕಿಸ್ತಾನಿ ಗೂಢಚಾರಿ ಸಂಸ್ಥೆಗೆ ಸೇರಿದ್ದಾಳೆಂದು ದೂರು ಸಹ ನೀಡಿದ್ದರು.

ಇದೆಲ್ಲವನ್ನೂ ಎದುರಿಸಿ ಈಗ ಜೀವನಾಂಶ ಪಡೆಯಲು ಸಫಲವಾಗಿರುವ ಮರಿಯಂ, ತನಗೆ ವಂಚಿಸಿದ ನೌಷಾದ್ ಗೆ ತಕ್ಕ ಪಾಠ ಕಲಿಸಬೇಕೆಂಬುದು ತಮ್ಮ ಇರಾದೆಯಾಗಿತ್ತು. ಮಹಿಳೆಯರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವವರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಲಿ ಎಂದಿದ್ದಾಳೆ. ವಾಪಾಸ್ ಯುಕೆ ಗೆ ತೆರಳುವ ಮುನ್ನ ಭಾರತ ಪ್ರವಾಸ ಕೈಗೊಳ್ಳುವುದಾಗಿ ಹೇಳಿರುವ ಆಕೆ, ಭಾರತೀಯ ಜನತೆ ಬಹಳ ಒಳ್ಳೆಯವರು. ತನ್ನ ನೆರವಿಗೆ ಇಂತವರು ಧಾವಿಸಿದ್ದರಿಂದಲೇ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...