alex Certify
ಕನ್ನಡ ದುನಿಯಾ       Mobile App
       

Kannada Duniya

ಲಕ್ಷಾಂತರ ರೂ.ಗೆ ಮಾರಾಟವಾಗಿದೆ ಮಮತಾ ಬ್ಯಾನರ್ಜಿ ಪೇಟಿಂಗ್

ಹೋರಾಟದ ರಾಜಕೀಯಕ್ಕೆ ಹೆಸರಾಗಿರುವ ದೀದಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇವಲ ರಾಜಕೀಯ ಮಾತ್ರ ಮಾಡೋದಿಲ್ಲ. ಮಮತಾ ಬ್ಯಾನರ್ಜಿ ಬಹಳ ಕ್ರಿಯೇಟಿವ್ ಆಗಿದ್ದಾರೆ. ಅವರ ಕೈನಲ್ಲಿ ಮೂಡಿದ ಚಿತ್ರಗಳು ಲಕ್ಷಕ್ಕೆ ಮಾರಾಟವಾಗುತ್ತವೆ.

ಮಮತಾ ಬ್ಯಾನರ್ಜಿ ಅತ್ಯುತ್ತಮ ಪೇಂಟರ್. ಅವರು 2006ರಲ್ಲಿ ಈ ಹವ್ಯಾಸ ಶುರು ಮಾಡಿದ್ರು. ಪ್ರದರ್ಶನಗಳಲ್ಲಿ ಕೂಡ ಮಮತಾ ಬ್ಯಾನರ್ಜಿ ಬಿಡಿಸಿದ ಪೇಟಿಂಗ್ ಗಳನ್ನು ಇಡಲಾಗುತ್ತದೆ. ಪೇಟಿಂಗ್ ಮಾರಾಟದಿಂದ ಬಂದ ಹಣವನ್ನು ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಪ್ರಚಾರ, ಕೆಲಸಕ್ಕೆ ಬಳಸ್ತಾರೆ.

ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೋತ ವೇಳೆ ಮಮತಾ ಬ್ಯಾನರ್ಜಿ ಪೇಟಿಂಗ್ ಶುರು ಮಾಡಿದ್ದರು. 2011ರಲ್ಲಿ ಭಾರತ ವಿಶ್ವಕಪ್ ಎತ್ತಿ ಹಿಡಿದ ನಂತ್ರ ಪೇಟಿಂಗ್ ಕೆಲಸ ನಿಲ್ಲಿಸಿದ್ದಾರೆ. 100ಕ್ಕೂ ಹೆಚ್ಚು ಪೇಟಿಂಗ್ ಗಳು ಪ್ರದರ್ಶನಗೊಂಡಿವೆ. ಲಕ್ಷಾಂತರ ರೂಪಾಯಿ ನೀಡಿ ಅಭಿಮಾನಿಗಳು ಮಮತಾ ಪೇಟಿಂಗ್ ಖರೀದಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...