alex Certify
ಕನ್ನಡ ದುನಿಯಾ       Mobile App
       

Kannada Duniya

ಅಕೌಂಟ್ ನಲ್ಲಿದ್ದ ಹಣ ಕಂಡು ಬೆಚ್ಚಿ ಬಿದ್ದ ಪಾನ್ ವಾಲಾ..!

black-money1500 ಹಾಗೂ 1000 ರೂ. ನೋಟುಗಳು ಅಮಾನ್ಯಗೊಂಡ ಬಳಿಕ ಕಾಳ ಧನಿಕರು ತಾವು ಸಂಗ್ರಹಿಸಿಟ್ಟುಕೊಂಡಿದ್ದ ಕಪ್ಪು ಹಣವನ್ನು ಸುಟ್ಟು ಹಾಕುವ, ಕಸದ ತೊಟ್ಟಿಗೆ ಸುರಿಯುವ ಹಾಗೂ ನದಿಯಲ್ಲಿ ತೇಲಿ ಬಿಡುವ ಮೂಲಕ ಗಂಡಾಂತರದಿಂದ ಪಾರಾಗುವ ಪ್ರಯತ್ನದಲ್ಲಿದ್ದರೆ ಜನ ಸಾಮಾನ್ಯರು ತಮ್ಮಲ್ಲಿರುವ ಹಣವನ್ನು ಬದಲಾಯಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಮಧ್ಯೆ ಜಾರ್ಖಂಡ್ ನ ಗಿರಿದ್ದ್ ಜಿಲ್ಲೆಯಿಂದ ಅಚ್ಚರಿದಾಯಕ ಪ್ರಕರಣವೊಂದು ವರದಿಯಾಗಿದೆ.

ಪಪ್ಪು ಕುಮಾರ್ ತಿವಾರಿ ಎಂಬ ಸಾಮಾನ್ಯ ಪಾನ್ ವಾಲಾ ಎಟಿಎಂ ಗೆ ಹಣ ಡ್ರಾ ಮಾಡಲು ತೆರಳಿದ ವೇಳೆ ಬೆಚ್ಚಿ ಬಿದ್ದಿದ್ದಾನೆ. ಪಪ್ಪು ಕುಮಾರ್ ತಿವಾರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದು, ಆತನ ಖಾತೆಯಲ್ಲಿ 4,580 ರೂ. ಗಳಿದ್ದು, ಅದರಲ್ಲಿ 1000 ರೂ. ಡ್ರಾ ಮಾಡಲು ಎಟಿಎಂ ಗೆ ತೆರಳಿದ್ದಾನೆ.

ಆದರೆ ಆತನ ಅಕೌಂಟ್ ಬ್ಲಾಕ್ ಆಗಿದ್ದ ಕಾರಣ ಹಣ ಡ್ರಾ ಮಾಡಲು ಸಾಧ್ಯವಾಗಿಲ್ಲ. ಈ ಕುರಿತು ವಿಚಾರಿಸಲು ಬ್ಯಾಂಕ್ ಗೆ ಹೋದ ಪಪ್ಪು ಕುಮಾರ್, ಅವರು ಹೇಳಿದ ವಿಷಯ ಕೇಳಿ ಬೆಚ್ಚಿ ಬಿದ್ದಿದ್ದಾನೆ. ಆತನ ಖಾತೆಗೆ ಬರೋಬ್ಬರಿ ಒಂಭತ್ತು ಕೋಟಿಗೂ ಅಧಿಕ ಹಣ (9,99,95,498 ರೂ.) ಜಮೆಯಾಗಿದ್ದ ಕಾರಣ ಬ್ಯಾಂಕ್ ಅಧಿಕಾರಿಗಳು ಅಕೌಂಟ್ ನ್ನು ಬ್ಲಾಕ್ ಮಾಡಿದ್ದಾರೆ.

ಹೀಗಾಗಿ ಆತನಿಗೆ ಹಣ ಪಡೆಯಲು ಸಾಧ್ಯವಾಗಿಲ್ಲ. ಇದುವರೆಗೆ ಅತ್ಯಧಿಕ ಅಂದರೆ 1.5 ಲಕ್ಷ ರೂ. ವ್ಯವಹಾರ ನಡೆಸಿರುವ ಪಪ್ಪು ಕುಮಾರ್ ತಿವಾರಿ, ತನ್ನ ಖಾತೆಗೆ ಸರಿ ಸುಮಾರು 10 ಕೋಟಿ ರೂ. ಜಮೆ ಮಾಡಿದವರ್ಯಾರು ಎಂಬುದರ ಕುರಿತು ತಲೆ ಕೆಡಿಸಿಕೊಂಡಿದ್ದಾನೆ. ನನಗೆ ರಾತ್ರೋರಾತ್ರಿ ಶ್ರೀಮಂತನಾಗಬೇಕೆಂಬ ಬಯಕೆಯಿಲ್ಲ. ನನ್ನ ಖಾತೆಯಲ್ಲಿರುವ ಹಣ ಬಂದರಷ್ಟೇ ಸಾಕೆಂದು ಆತ ಹೇಳುತ್ತಿದ್ದಾನೆ. ಖಾತೆಯನ್ನು ಪರಿಶೀಲಿಸಿ ಬಳಿಕ ಹಣ ನೀಡುವುದಾಗಿ ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...