alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ

dulhan_1024_1496898023_749x421

ದಾಂಪತ್ಯ ಜೀವನ ಸದಾ ಸುಖಕರವಾಗಿರಬೇಕೆಂದಾದಲ್ಲಿ ಮದುವೆಯಾಗುವ ಯುವಕ-ಯುವತಿಯರು ಕೆಲವೊಂದು ವಿಷಯವನ್ನು ಅವಶ್ಯವಾಗಿ ತಿಳಿದಿರಬೇಕಾಗುತ್ತದೆ. ಮದುವೆಯ ಮೊದಲ ರಾತ್ರಿ ಪರಸ್ಪರ ಅರ್ಥ ಮಾಡಿಕೊಳ್ಳಲು ಸಮಯ ಸಿಗುತ್ತದೆ. ಅಂದಿನಿಂದಲೇ ಜೀವನದ ಹೊಸ ಅಧ್ಯಾಯ ಶುರುವಾಗುತ್ತದೆ.

ಹಾಗಾಗಿ ಮೊದಲ ರಾತ್ರಿ ಸಂಗಾತಿ ಜೊತೆ ಯಾವ ವಿಷಯವನ್ನು ಮಾತನಾಡಬೇಕು ಯಾವ ವಿಷಯವನ್ನು ಮಾತನಾಡಬಾರದು ಎಂಬುದನ್ನು ತಿಳಿದುಕೊಳ್ಳಬೇಕು. ಮೊದಲ ರಾತ್ರಿ ನೀವು ಮಾಡುವ ತಪ್ಪು ನಿಮ್ಮ ದಾಂಪತ್ಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಮೊದಲ ರಾತ್ರಿ ನೀವಾಡುವ ಮಾತು ನಿಮ್ಮ ಸಂಬಂಧವನ್ನೇ ಹಾಳು ಮಾಡುವ ಸಾಧ್ಯತೆ ಇದೆ. ಹಾಗಾಗಿ ಕಳೆದ ದಿನಗಳ ಬಗ್ಗೆ ಮೊದಲ ರಾತ್ರಿ ಮಾತನಾಡಬೇಡಿ. ಹಿಂದೆ ನಿಮ್ಮ ಸಂಗಾತಿ ಹೇಗಿದ್ದರು, ಅವರ ಜೀವನ ಹೇಗಿತ್ತು ಎಂಬುದು ಈಗ ಬೇಡ.

ಪರಸ್ಪರ ಹಾಗೂ ಕುಟುಂಬಸ್ಥರ ನ್ಯೂನ್ಯತೆ ಬಗ್ಗೆ ಮಾತನಾಡಬೇಡಿ. ಕುಟುಂಬಸ್ಥರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ಅದು ಸಂಗಾತಿ ಮೇಲೆ ಪರಿಣಾಮ ಬೀರುತ್ತದೆ.

ಶಾರೀರಿಕ ಸಂಬಂಧ ಬೆಳೆಸಲು ಆತುರ ಬೇಡ. ಮೊದಲ ರಾತ್ರಿ ಪರಸ್ಪರ ತಿಳಿಯಲು ಹಾಗೂ ಅರ್ಥ ಮಾಡಿಕೊಳ್ಳುವ ರಾತ್ರಿ. ಈ ರಾತ್ರಿ ಶಾರೀರಿಕ ಸಂಬಂಧ ಬೆಳೆಸಲು ಆತುರ ಬೇಡ. ನಿಮ್ಮ ಸಂಗಾತಿ ಅಭಿಪ್ರಾಯವೂ ಇದ್ರಲ್ಲಿ ಮಹತ್ವ ಪಡೆಯುತ್ತದೆ.

ಎಲ್ಲರೂ ಎಲ್ಲದರಲ್ಲಿಯೂ ಪರಿಪೂರ್ಣರಲ್ಲ. ನಿಮ್ಮಲ್ಲಿಯೂ ಅನೇಕ ನ್ಯೂನ್ಯತೆಗಳಿರುತ್ತವೆ. ನಿಮ್ಮ ಸಂಗಾತಿಯಲ್ಲೂ ನ್ಯೂನ್ಯತೆಗಳಿರುತ್ತವೆ. ಅದನ್ನು ಮೊದಲ ರಾತ್ರಿ ಎತ್ತಿ ಹೇಳುವ ಅಗತ್ಯವಿಲ್ಲ.

ನೀವೊಂದೇ ಮಾತನಾಡಬೇಕೆಂದಿಲ್ಲ. ನಿಮ್ಮ ಸಂಗಾತಿಗೂ ಮಾತನಾಡಲು ಬಿಡಿ. ನಿಮಗೆ ಮಾತನಾಡಲು ಸಾಕಷ್ಟು ವಿಷಯವಿದ್ದರೂ ಸಂಗಾತಿ ಮಾತನಾಡಲು ಬಿಡಿ. ಆಗ ಸಂಗಾತಿಗೆ ಖುಷಿಯಾಗುವ ಜೊತೆಗೆ ನಿಮ್ಮ ಮೇಲೆ ಗೌರವ ಹೆಚ್ಚಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...