alex Certify
ಕನ್ನಡ ದುನಿಯಾ       Mobile App
       

Kannada Duniya

ಯಶಸ್ವಿ ಸಂಭೋಗಕ್ಕೆ ಇದು ಅತ್ಯಗತ್ಯ

ಮಹಿಳೆಯರೊಂದೇ ಅಲ್ಲ ಪುರುಷರು ಕೂಡ ತೂಕ ಹೆಚ್ಚಾದಂತೆ ಚಿಂತೆಗೆ ಬೀಳ್ತಾರೆ. ಅದ್ರಲ್ಲೂ ಮದುವೆ ನಂತ್ರ ತೂಕ ಹೆಚ್ಚಾಗ್ತಾ ಹೋದಂತೆ ಸಂಗಾತಿ ಮುಂದೆ ಹೋಗಲು ಮುಜುಗರಪಟ್ಟುಕೊಳ್ತಾರೆ. ಇದು ಸೆಕ್ಸ್ ಜೀವನದ ಮೇಲೂ ಪರಿಣಾಮ ಬೀರುತ್ತದೆ.

ತೂಕ ಕಡಿಮೆ ಮಾಡಿಕೊಂಡಲ್ಲಿ ಇದು ನಿಮ್ಮ ಆರೋಗ್ಯ ವೃದ್ಧಿಗೆ ನೆರವಾಗುವುದೊಂದೇ ಅಲ್ಲ ಸೆಕ್ಸ್ ಜೀವನ ಅತ್ಯುತ್ತಮವಾಗಲು ನೆರವಾಗುತ್ತದೆ. ತಜ್ಞರ ಪ್ರಕಾರ ತೂಕ ಹೆಚ್ಚಾದಂತೆ ರಕ್ತನಾಳದ ಸುತ್ತಲೂ ಹೆಚ್ಚುವರಿ ಪದರ ಕಾಣಿಸಿಕೊಳ್ಳುತ್ತದೆ. ಇದ್ರಿಂದ ಜನನಾಂಗದಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಇದ್ರಿಂದ ಪರಾಕಾಷ್ಠೆ ತಲುಪಲು ಸಾಧ್ಯವಾಗುವುದಿಲ್ಲ.

ಸಂಗಾತಿ ನಡುವಿನ ಪ್ರೀತಿ ಹಾಗೂ ವಿಶ್ವಾಸ ಇಬ್ಬರು ಹತ್ತಿರ ಬರಲು ನೆರವಾಗುತ್ತದೆ. ತೂಕ ಹೆಚ್ಚಾದಂತೆ ಮುಜುಗರ ಹೆಚ್ಚಾಗುತ್ತದೆ. ಇದ್ರಿಂದ ಸಂಗಾತಿಗಳ ನಡುವೆ ಅಂತರ ಜಾಸ್ತಿಯಾಗುತ್ತದೆ. ತೂಕ ಕಡಿಮೆ ಮಾಡಿಕೊಂಡಲ್ಲಿ ಮುಜುಗರ ಕಡಿಮೆಯಾಗಿ ಇಬ್ಬರ ನಡುವೆ ಆಪ್ತತೆ ಹೆಚ್ಚಾಗುತ್ತದೆ.

ಒಮ್ಮೆ ಸೆಕ್ಸ್ ಮಾಡಿದ ನಂತ್ರ ಸುಸ್ತಾಗಿ ಮತ್ತೊಮ್ಮೆ ಸೆಕ್ಸ್ ಬೇಡವೇ ಬೇಡ ಎಂಬ ನಿರ್ಧಾರ ನಿಮ್ಮ ಮನಸ್ಸಿನಲ್ಲಿ ಬಂದ್ರೆ ನಿಮ್ಮ ತೂಕ ಹೆಚ್ಚಿದೆ ಎಂದೇ ಅರ್ಥ. ತೂಕ ಹೆಚ್ಚಾದಂತೆ ಶಕ್ತಿ ಕಡಿಮೆಯಾಗುತ್ತದೆ. ಇದ್ರಿಂದ ಆರೋಗ್ಯಕರ ಸೆಕ್ಸ್ ಸಾಧ್ಯವಾಗುವುದಿಲ್ಲ.

ಹೆಚ್ಚಿನ ತೂಕವುಳ್ಳವರು ಸೆಕ್ಸ್ ನಲ್ಲಿ ಹೊಸ ಹೊಸ ಪ್ರಯೋಗ ಮಾಡಲು ಸಾಧ್ಯವಾಗುವುದಿಲ್ಲ. ಒಂದೇ ಭಂಗಿ ಸೆಕ್ಸ್ ಸಂಗಾತಿ ಬೇಸರಕ್ಕೆ ಕಾರಣವಾಗುತ್ತದೆ. ಹಾಗಾಗಿ ಉತ್ತಮ ಸೆಕ್ಸ್ ಜೀವನ ಬಯಸುವವರು ಮೊದಲು ತೂಕ ಇಳಿಸಿಕೊಂಡು ಫಿಟ್ ಆಗಿರಬೇಕು.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...