alex Certify
ಕನ್ನಡ ದುನಿಯಾ       Mobile App
       

Kannada Duniya

ನೀರಿನೊಳಗೆ ನಾದಸ್ವರ!

band-29-1472465546ನೀರಿನೊಳಗೆ ಮುಳುಗುವುದು, ಡಾನ್ಸ್ ಮಾಡುವುದು ಮತ್ತು ಇನ್ನಿತರ ಸಾಹಸ ಕ್ರೀಡೆಗಳನ್ನು ನೋಡಿದ್ದೀರಿ. ಆದರೆ ನೀರಿನೊಳಗೆ ಮುಳುಗಿ ನಾನಾ ವಿಧದ ವಾದ್ಯಗಳನ್ನು ಬಾರಿಸುವುದು, ಹಾಡು ಹಾಡುವುದನ್ನು ಬಹುಶಃ ನೋಡಿರಲಿಕ್ಕಿಲ್ಲ.

ಬೀಟ್ ವೀನ್ ಬ್ಯಾಂಡ್ ಹೆಸರಿನ ಕಲಾತಂಡ ಈ ಒಂದು ವಿನೂತನ ಕಲೆಯನ್ನು ಜಗತ್ತಿಗೆ ಪರಿಚಯಿಸಿದೆ. ಇವರು ನೀರಿನೊಳಗೆ ಮುಳುಗಿ ಹಾಡು ಹಾಡುತ್ತಾರೆ ಮತ್ತು ಬಹುವಿಧದ ಸಂಗೀತ ವಾದ್ಯಗಳನ್ನು ನುಡಿಸುತ್ತಾರೆ.

ಈ ಸಂಗೀತಗಾರರು ಎಕ್ವೇರಿಯಮ್ ನಂತಹುದೇ ಒಂದು ದೊಡ್ಡ ಗ್ಲಾಸ್ ಟ್ಯಾಂಕ್ ಒಳಗೆ ಮುಳುಗಿ ವಾದ್ಯಗಳನ್ನು ನುಡಿಸುತ್ತಾರೆ. ನೀರಿನಲ್ಲಿ ಮುಳುಗಿ ಉಸಿರನ್ನು ಬಿಗಿಹಿಡಿದು ನಾದ ಹೊಮ್ಮಿಸುವ ಅವರ ಪ್ರಾವೀಣ್ಯತೆಗೆ ಎಂಥವರೂ ತಲೆದೂಗಲೇಬೇಕು.

ಈ ರೀತಿಯ ವಾದ್ಯಗಳನ್ನು ನುಡಿಸಲು ಹತ್ತಾರು ವರ್ಷಗಳ ತರಬೇತಿಯ ಅಗತ್ಯವಿರುತ್ತದೆ. ಬೀಟ್ ವೀನ್ ಬ್ಯಾಂಡ್ ನ ಮುಖ್ಯಸ್ಥೆ ಲೈಲಾ ಸ್ಕೋವ್ ಮಂದ್ ಮೊದಮೊದಲು ದೊಡ್ಡ ಪಾತ್ರೆಯಲ್ಲಿ ಮುಖವನ್ನು ಮುಳುಗಿಸಿಕೊಂಡು ಹಾಡಿನ ತರಬೇತಿ ಮಾಡುತ್ತಿದ್ದರಂತೆ. ನೀರಿನ ಒಳಗಡೆ ಬಾರಿಸಲು ಅನುಕೂಲವಾಗುವಂತ ಮತ್ತು ನೀರಿನಲ್ಲಿ ಹಾಳಾಗದಂತ ವಾದ್ಯಗಳನ್ನು ತಯಾರಿಸಲಾಗಿದೆ. ಒಟ್ಟಿನಲ್ಲಿ ತಮ್ಮ ಹೊಸ ರೀತಿಯ ಸಂಗೀತ ಕಲೆಯಿಂದ ಈ ಕಲಾಕಾರರು ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...