alex Certify
ಕನ್ನಡ ದುನಿಯಾ       Mobile App
       

Kannada Duniya

ಯುದ್ಧನೌಕೆ ‘ಐಎನ್ಎಸ್ ವಿರಾಟ್’ ಗೆ ಇಂದು ವಿದಾಯ….

ins

ಸುಮಾರು 6 ದಶಕಗಳ ಸೇವೆಯ ಬಳಿಕ ಭಾರತೀಯ ನೌಕಾಪಡೆಯ ಯುದ್ಧನೌಕೆ ‘ಐಎಸ್ಎಸ್ ವಿರಾಟ್’ ಇಂದು ನಿವೃತ್ತಿ ಹೊಂದುತ್ತಿದೆ. ಕಳೆದ ನಾಲ್ಕು ತಿಂಗಳುಗಳಿಂದ ಈ ನೌಕೆಯನ್ನು ಖರೀದಿಸಲು ಯಾರೂ ಮುಂದೆ ಬಂದಿಲ್ಲ. ಹಾಗಾಗಿ ಇದನ್ನು ತುಂಡರಿಸಿ ಗುಜರಿಗೆ ಹಾಕಲಾಗುತ್ತದೆ ಅಂತಾ ನೌಕಾಪಡೆಯ ಮುಖ್ಯಸ್ಥ ಸುನಿಲ್ ಲಂಬಾ ತಿಳಿಸಿದ್ದಾರೆ.

ನೌಕೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಆಂಧ್ರಪ್ರದೇಶ ಸರ್ಕಾರ ಆಸಕ್ತಿ ತೋರಿತ್ತು. ಆದ್ರೆ ಈ ಯೋಜನೆಗೆ 1000 ಕೋಟಿ ರೂಪಾಯಿ ವೆಚ್ಚವಾಗಲಿದೆ. 27 ವರ್ಷಗಳ ಕಾಲ ರಾಯಲ್ ನೇವಿಯಲ್ಲಿ ಸೇವೆ ಸಲ್ಲಿಸಿದ್ದ ಐಎನ್ಎಸ್ ವಿರಾಟ್, 30 ವರ್ಷಗಳ ಕಾಲ ಭಾರತೀಯ ನೌಕಾಪಡೆಯ ಭಾಗವಾಗಿತ್ತು.

27 ಬಾರಿ ವಿಶ್ವಪರ್ಯಟನೆ ಮಾಡಿರುವ ಈ ನೌಕೆ ಬರೋಬ್ಬರಿ 11 ಲಕ್ಷ ಕಿಮೀ ದೂರ ಕ್ರಮಿಸಿತ್ತು. ಆಪರೇಷನ್ ಪವನ್ ಮತ್ತು ಪರಾಕ್ರಮ್ ಸೇರಿದಂತೆ ಭಾರತೀಯ ನೌಕಾಪಡೆ ಕೈಗೊಂಡಿದ್ದ ಅನೇಕ ಕಾರ್ಯಾಚರಣೆಗಳಲ್ಲಿ ವಿರಾಟ್ ಸಾಥ್ ಕೊಟ್ಟಿದೆ. ಮುಂಬೈನಲ್ಲಿಂದು ಐಎನ್ಎಸ್ ವಿರಾಟ್ ನೌಕೆಯ ನಿವೃತ್ತಿ ಕಾರ್ಯಕ್ರಮ ನಡೆಯಲಿದ್ದು, 21 ಮಾಜಿ ಕಮಾಂಡರ್ ಗಳು ಪಾಲ್ಗೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...