alex Certify
ಕನ್ನಡ ದುನಿಯಾ       Mobile App
       

Kannada Duniya

ವಯಸ್ಸಾದ ತಂದೆಗೆ ಜನಿಸುವ ಮಕ್ಕಳೇ ಹೆಚ್ಚು ಬುದ್ಧಿವಂತರು

olderdad

ಸಾಮಾನ್ಯವಾಗಿ ಯುವಕರು 26-28 ವರ್ಷಕ್ಕೆಲ್ಲಾ ಮದುವೆ ಆಗ್ತಾರೆ. 30 ವರ್ಷಕ್ಕೊಂದು ಮಗು, ತಂದೆ ನಿವೃತ್ತಿಯಾಗೋದ್ರೊಳಗೆ ಮಕ್ಕಳ ಓದು ಮುಗಿದು ಸೆಟಲ್ ಆಗಬೇಕು ಅನ್ನೋದು ಎಲ್ಲರ ಲೆಕ್ಕಾಚಾರ. ಆದ್ರೆ ತಂದೆಗೆ ಹೆಚ್ಚು ವಯಸ್ಸಾದ್ಮೇಲೆ ಹುಟ್ಟಿದ ಮಕ್ಕಳು ಹೆಚ್ಚು ಬುದ್ಧಿವಂತರಾಗುತ್ತಾರಂತೆ.

ನ್ಯೂ ಕಿಂಗ್ಸ್ ಕಾಲೇಜ್ ಲಂಡನ್ ನಲ್ಲಿ ನಡೆಸಿದ ಸಂಶೋಧನೆಯಲ್ಲಿ ಈ ಅಂಶ ದೃಢಪಟ್ಟಿದೆ. ಪುರುಷರಿಗೆ ಹೆಚ್ಚು ವಯಸ್ಸಾದ ಮೇಲೆ ಮಕ್ಕಳು ಜನಿಸಿದ್ರೆ ಆಟಿಸಂ, ಸ್ಕ್ರಿಜೋಫ್ರೀನಿಯಾದಂತಹ ತೊಂದರೆಗಳು ಕಾಣಿಸಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ ಅಂತಾ ಹೇಳಲಾಗುತ್ತಿತ್ತು.

ಈಗ ನಡೆಸಿರುವ ಹೊಸ ಸಂಶೋಧನೆಯಲ್ಲಿ ವಯಸ್ಸಾದ ತಂದೆಗೆ ಜನಿಸುವ ಮಕ್ಕಳ ಬಗೆಗಿನ ಪಾಸಿಟಿವ್ ಅಂಶಗಳನ್ನು ಪತ್ತೆ ಮಾಡಲಾಗಿದೆ. ಸುಮಾರು 15,000 ಅವಳಿಗಳನ್ನು ಪರೀಕ್ಷೆಗೆ ಒಳಪಡಿಸಿ ಈ ಸಂಶೋಧನೆಯನ್ನು ಮಾಡಲಾಗಿದೆ. ಮಕ್ಕಳ ಐಕ್ಯೂ, ಏಕಾಗ್ರತೆ, ಆಸಕ್ತಿ, ಹವ್ಯಾಸ, ಸಾಮಾನ್ಯ ಜ್ಞಾನ ಎಲ್ಲವನ್ನೂ ಪರೀಕ್ಷಿಸಲಾಗಿದೆ.

ವಯಸ್ಸಾದ ತಂದೆಗೆ ಜನಿಸಿದ ಮಕ್ಕಳು ಶೈಕ್ಷಣಿಕ ವಿಭಾಗದಲ್ಲೂ ಉಳಿದವರಿಗಿಂತ ಹೆಚ್ಚು ಸಾಧನೆ ಮಾಡಿದ್ದಾರೆ. ಓದಿನಲ್ಲಿ ಮುಂದಿದ್ದಾರೆ, ಪರೀಕ್ಷೆಗಳಲ್ಲೂ ಉತ್ತಮ ಅಂಕ ಪಡೆದಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಗಣಿತ, ಎಂಜಿನಿಯರಿಂಗ್ ಹೀಗೆ ಎಲ್ಲಾ ವಿಭಾಗಗಳಲ್ಲೂ ಅವರೇ ಮುಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...