alex Certify
ಕನ್ನಡ ದುನಿಯಾ       Mobile App
       

Kannada Duniya

60 ವರ್ಷದಿಂದ ಒಂದಗಳು ಅನ್ನವನ್ನೂ ತಿಂದಿಲ್ಲ ಈ ತಾಯಿ

ಎರಡು ಹೊತ್ತಿನ ಊಟಕ್ಕಾಗಿ ಜನರು ಹಗಲು-ರಾತ್ರಿ ದುಡಿಯುತ್ತಾರೆ. ಹೊಟ್ಟೆ ತುಂಬಿಸಿಕೊಳ್ಳಲು ಎಷ್ಟು ಕಷ್ಟಪಡ್ತಾರೆ. ಆದ್ರೆ ಇಲ್ಲೊಂದು ಮಹಿಳೆ ಅನ್ನ-ರೊಟ್ಟಿಯಿಲ್ಲದೆ ಕಳೆದ 60 ವರ್ಷಗಳಿಂದ ಆರಾಮವಾಗಿ ಜೀವನ ನಡೆಸ್ತಿದ್ದಾಳೆಂದ್ರೆ ನಿಮಗೆ ಆಶ್ಚರ್ಯವಾಗಬಹುದು.

75 ವರ್ಷದ ಸರಸ್ವತಿ ದೇವಿ ಕಳೆದ 60 ವರ್ಷಗಳಿಂದ ಅನ್ನವನ್ನು ಮುಟ್ಟಿಯೇಯಿಲ್ಲ. ಮಧ್ಯಪ್ರದೇಶದ ದಾಮನೋದ್ ನಲ್ಲಿ ವಾಸವಾಗಿರುವ 75 ವರ್ಷದ ಸರಸ್ವತಿ ಕೇವಲ ಟೀ ಹಾಗೂ ನೀರು ಕುಡಿದು ಬದುಕುತ್ತಿದ್ದಾಳೆ. ಅನ್ನ ತಿನ್ನದ ಮಹಿಳೆ ಹಾಸಿಗೆ ಹಿಡಿದಿದ್ದಾಳೆ ಎಂದುಕೊಳ್ಳಬೇಡಿ. ಸರಸ್ವತಿ ತನ್ನ ಜಮೀನಿನಲ್ಲಿ ಕೆಲಸ ಮಾಡ್ತಾಳೆ. ಬೆವರು ಸುರಿಸಿ ದುಡಿಯುತ್ತಾಳೆ.

ಕಡಿಮೆ ವಯಸ್ಸಿನಲ್ಲಿಯೇ 5 ಮಕ್ಕಳ ತಾಯಿಯಾಗಿದ್ದ ಸರಸ್ವತಿ ದೇವಿಗೆ ಮೊದಲ ಬಾರಿ ಹೆರಿಗೆಯಾದಾಗ ಟೈಪಾಯಿಡ್ ಕಾಣಿಸಿಕೊಂಡಿತ್ತು. ಈ ವೇಳೆ ಏನು ತಿಂದ್ರೂ ವಾಂತಿಯಾಗ್ತಿತ್ತು. ಸರಸ್ವತಿಗೆ ಸೂಕ್ತ ಚಿಕಿತ್ಸೆ ನೀಡಲಾಯ್ತು. ಆರೋಗ್ಯವೇನೋ ಸುಧಾರಿಸ್ತು. ಆದ್ರೆ ಬಾಯಿ ರುಚಿ ಇರಲಿಲ್ಲ. ಸರಸ್ವತಿಗೆ ಏನು ತಿಂದ್ರೂ ವಾಪಸ್ ಬರ್ತಾಯಿತ್ತು. ಎಷ್ಟು ವೈದ್ಯರಿಗೆ ತೋರಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಸರಸ್ವತಿ ಅನ್ನ, ರೊಟ್ಟಿ ಸೇರಿದಂತೆ ಯಾವ ತಿಂಡಿಯನ್ನೂ ತಿನ್ನುವುದಿಲ್ಲ. ಟೀ ಹಾಗೂ ನೀರು ಬಿಟ್ಟರೆ ವಾರಕ್ಕೊಂದು ಬಾಳೆಹಣ್ಣು ತಿನ್ನುತ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...