alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಂತಕ್ಕೆ ಸೂರಿಲ್ಲದಿದ್ದರೂ ಬಡವರಿಗಾಗಿ ಮಿಡಿದಿದೆ ಈತನ ‘ಹೃದಯ’

ಬಹುತೇಕ ಸ್ವಾರ್ಥಿಗಳೇ ತುಂಬಿರುವ ಈ ಜಗತ್ತಿನಲ್ಲಿ ಈ ಕಾಲದಲ್ಲೂ ಇಂತವರಿದ್ದರಾ ಎಂದು ಈ ಸ್ಟೋರಿ ಓದಿದ ಬಳಿಕ ಮೂಗಿನ ಮೇಲೆ ಬೆರಳಿಡುತ್ತೀರಿ. ಸ್ವಂತಕ್ಕೊಂದು ಸೂರಿಲ್ಲದಿದ್ದರೂ ಬಡ ಜನರಿಗೆ ನೆರವಾಗಬೇಕೆಂಬ ಸಂಕಲ್ಪ ಕೈಗೊಂಡ ವ್ಯಕ್ತಿಯೊಬ್ಬರು ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಮಿಯನ್ನು ಭೂರಹಿತರಿಗೆ ಉಚಿತವಾಗಿ ನೀಡಿದ್ದಾರೆ. ಅಂದ ಹಾಗೇ ಈ ವ್ಯಕ್ತಿ ಆಗರ್ಭ ಶ್ರೀಮಂತರೇನಲ್ಲವೆಂಬುದು ಗಮನಾರ್ಹ ಸಂಗತಿ.

ಒಡಿಶಾದ ಕೋರಪತ್ ಜಿಲ್ಲೆಯ ನಿವಾಸಿ 60 ವರ್ಷದ ಮುಗುದ ಸೂರ್ಯನಾರಾಯಣ್ ಅಚರೆ, ತಮ್ಮ ಸ್ವಂತ ಹಣದಿಂದ 2.3 ಎಕರೆ ಭೂಮಿಯನ್ನು ಖರೀದಿಸಿದ್ದು, ಸುಮಾರು 250 ಭೂರಹಿತ ಬಡ ಜನರಿಗೆ ಉಚಿತವಾಗಿ ಹಂಚಿದ್ದಾರೆ. ಚಿಕ್ಕದೊಂದು ವರ್ಕ್ ಶಾಪ್ ಹೊಂದಿರುವ 15 ಜನರ ಕುಟುಂಬದ ಹಿರಿಯ ಸೂರ್ಯನಾರಾಯಣ್, ತಮಗೆ ಭೂಮಿ ದಾನ ನೀಡುವಂತೆ ಪೂಜಾರಿಯೊಬ್ಬರು ನೀಡಿದ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿದ್ದಾರೆ.

ಉದ್ಯಮ ನಡೆಸಲು ಸಂಕಷ್ಟ ಬಂದೊದಗಿದ ವೇಳೆಯೂ ಸೂರ್ಯನಾರಾಯಣ್ ತಾವು ದಾನ ಮಾಡಲೆಂದು ಖರೀದಿಸಿದ ಭೂಮಿಯನ್ನು ಮಾರಾಟ ಮಾಡದೆ ಸ್ವಂತ ಮನೆಯನ್ನೇ ಮಾರಾಟ ಮಾಡಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ತಾವು ದಾನ ಮಾಡಿದ ಭೂಮಿಯನ್ನು ಭೂರಹಿತರ ಹೆಸರಿಗೆ ವರ್ಗಾಯಿಸಿರುವ ಸೂರ್ಯನಾರಾಯಣ್, ಈಗ ತಮಗೆ ಪೂರ್ಣ ತೃಪ್ತಿಯಿದೆ ಎಂದು ಹೇಳಿದ್ದಾರೆ. ಅವರ ದಾನ ಕಾರ್ಯಕ್ಕೆ ಇಡೀ ಕುಟುಂಬದ ಬೆಂಬಲವಿರುವುದು ಗಮನಾರ್ಹ ಸಂಗತಿ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...