alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶಿಷ್ಟವಾದ ವಿಶ್ವ ದಾಖಲೆ ಮಾಡಿದ್ದಾನೆ ಓಡಿಶಾ ಯುವಕ

ಓಡಿಶಾದ ಯುವಕನೊಬ್ಬ ವಿಶಿಷ್ಟವಾದ ಗಿನ್ನಿಸ್ ದಾಖಲೆ ಮಾಡಿದ್ದಾನೆ. ಬಾಯಲ್ಲಿ ಅತಿ ಹೆಚ್ಚು ಸ್ಟ್ರಾ ಇಟ್ಟುಕೊಂಡ ಸಾಧನೆ ಇವನದ್ದು. ಬೆರ್ಹಾಂಪುರ ನಿವಾಸಿ ಮನೋಜ್ ಕುಮಾರ್ ಮಹಾರಾಣಾ ಒಟ್ಟು 459 ಸ್ಟ್ರಾಗಳನ್ನು ಬಾಯಲ್ಲಿ ಇಟ್ಟುಕೊಂಡಿದ್ದ. ಕೈಗಳ ಸಹಾಯವಿಲ್ಲದೆ 10 ಸೆಕೆಂಡ್ ಗಳ  ಕಾಲ ಸ್ಟ್ರಾಗಳನ್ನು ಬಾಯಲ್ಲಿ ಇಟ್ಟುಕೊಂಡು ವಿಶ್ವದಾಖಲೆ ಮಾಡಿದ್ದಾನೆ.

ಈ ಹಿಂದೆ 400 ಸ್ಟ್ರಾಗಳನ್ನು ಇಟ್ಟುಕೊಂಡಿದ್ದೇ ಗಿನ್ನಿಸ್ ದಾಖಲೆಯಾಗಿತ್ತು. ಮನೋಜ್ ಆ ದಾಖಲೆಯನ್ನು ಮುರಿದಿದ್ದಾನೆ. 10 ಸೆಕೆಂಡ್ ಗಳ ಕಾಲ ಎಲ್ಲಾ ಸ್ಟ್ರಾಗಳನ್ನು ಬಾಯಲ್ಲಿ ಇಟ್ಟುಕೊಳ್ಳುವುದೇ ಬಹಳ ಕಠಿಣ ಸವಾಲಾಗಿತ್ತು. ಒಂದೇ ಒಂದು ಸ್ಟ್ರಾ ಕೆಳಕ್ಕೆ ಬಿದ್ರೂ ಮನೋಜ್ ನಿಂದ ದಾಖಲೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಪ್ರತಿ ಸ್ಟ್ರಾ 0.64 ಸೆಂ.ಮೀ. ಅಗಲವಿರಬೇಕೆಂಬ ನಿಯಮವಿತ್ತು. ಸ್ಟ್ರಾಗಳನ್ನೆಲ್ಲ ಒಂದುಗೂಡಿಸಿ ರಬ್ಬರ್ ಬ್ಯಾಂಡ್ ಬಿಗಿದುಕೊಳ್ಳಲು ಅವಕಾಶ ನೀಡಲಾಗಿತ್ತು. ಚಿಕ್ಕವನಿದ್ದಾಗಿನಿಂದ್ಲೂ ಗಿನ್ನಿಸ್ ದಾಖಲೆಯ ಕನಸು ಕಾಣುತ್ತಿದ್ದ ಮನೋಜ್, ಈಗ ಅದನ್ನು ನನಸಾಗಿಸಿಕೊಂಡಿದ್ದಾನೆ. 2009ರಲ್ಲಿ ಸಿಮೊನ್ ಎಲ್ಮೋರೆ ಮಾಡಿದ್ದ ದಾಖಲೆಯನ್ನು ಮುರಿದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...