alex Certify
ಕನ್ನಡ ದುನಿಯಾ       Mobile App
       

Kannada Duniya

ಆ ಅಪ್ರತಿಮ ಫೋಟೋದ ನಾಯಕಿ ಇನ್ನಿಲ್ಲ….

NURSE KISS1945ರಲ್ಲಿ ಮುಕ್ತಾಯವಾದ ಎರಡನೇ ಜಾಗತಿಕ ಯುದ್ಧದ ನಂತರ ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ತೆಗೆಯಲಾಗಿದ್ದ ಅಪ್ರತಿಮ ಚಿತ್ರದಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ.

ನಾವಿಕನಿಗೆ ಮುತ್ತಿಕ್ಕುವ ಮೂಲಕ ಅನನ್ಯ ಫೋಟೋಗೆ ಗ್ರೆಟಾ ಫ್ರೈಡ್ ಮನ್ ಸಾಕ್ಷಿಯಾಗಿದ್ದಳು. ಆಕೆಗೆ 92 ವರ್ಷ ವಯಸ್ಸಾಗಿದ್ದು, ವರ್ಜೀನಿಯಾದ ರಿಚ್ಮಂಡ್ ನಲ್ಲಿ ಕೊನೆಯುಸಿರೆಳೆದಿದ್ದಾಳೆ ಅಂತಾ ಪುತ್ರ ಜೋಶುವಾ ತಿಳಿಸಿದ್ದಾರೆ.

ಆ ಕಪ್ಪು ಬಿಳುಪು ಚಿತ್ರದಲ್ಲಿ ಗ್ರೆಟಾ ಬೆಳ್ಳನೆಯ ಸಮವಸ್ತ್ರ ಧರಿಸಿದ್ದಾಳೆ. ಯುದ್ಧ ಮುಕ್ತಾಯವಾದ ಖುಷಿಯಲ್ಲಿ ನಾವಿಕನೊಬ್ಬ ಆಕೆಯನ್ನು ಬರಸೆಳೆದು ಮುತ್ತಿಟ್ಟ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಆಗ 21ರ ಹರೆಯದ ಗ್ರೆಟಾ, ಡೆಂಟಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ಲು. ಜಪಾನ್, ಅಮೆರಿಕಕ್ಕೆ ಶರಣಾಗುವ ಮೂಲಕ ಯುದ್ಧ ಅಂತ್ಯದ ಘೋಷಣೆ ಮಾಡಿದ ಸಂದರ್ಭದಲ್ಲಿ ಗ್ರೆಟಾ ಟೈಮ್ಸ್ ಸ್ಕ್ವೇರ್ ನಲ್ಲಿದ್ಲು. ಖ್ಯಾತ ಛಾಯಾಗ್ರಾಹಕ ಆಲ್ ಫ್ರೆಡ್ ಎಸೆನ್ಸ್ಟೀಡ್ ತೆಗೆದಿದ್ದ ಈ ಫೋಟೋ ಲೈಫ್ ಮ್ಯಾಗಝೀನ್ ನಲ್ಲಿ ಪ್ರಕಟವಾಗಿತ್ತು.

ಚುಂಬನದ ಫೋಟೋದಲ್ಲಿರುವ ಇಬ್ಬರು ಯಾರು ಅನ್ನೋದು ಮಾತ್ರ ನಿಗೂಢವಾಗಿತ್ತು. 1980 ರಲ್ಲಿ ಆ ಅದ್ಭುತ ಫೋಟೋದಲ್ಲಿದ್ದವರು ಗ್ರೆಟಾ ಹಾಗೂ ಜಾರ್ಜ್ ಮೆಂಡೋನ್ಸಾ ಅನ್ನೋದು ಬಯಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...