alex Certify
ಕನ್ನಡ ದುನಿಯಾ       Mobile App
       

Kannada Duniya

ಎನ್ ಆರ್ ಐ ವರನ ಕನಸು ಕಾಣುವವರು ಓದಲೇಬೇಕಾದ ಸುದ್ದಿ

26_09_2016-dulhan

ಹೆಣ್ಣು ಮಕ್ಕಳಿಗೆ ವರನನ್ನು ಹುಡುಕುವುದು ಪಾಲಕರ ಜವಾಬ್ದಾರಿ ಕೆಲಸಗಳಲ್ಲೊಂದು. ಗುಣವಂತ, ವಿದ್ಯಾವಂತ ಹಾಗೂ ಶ್ರೀಮಂತ ವರ ಬೇಕೆಂಬುದು ಎಲ್ಲರ ಬೇಡಿಕೆ. ಎನ್ ಆರ್ ಐ ವರ ಬೇಕು ಎನ್ನುವ ಬೇಡಿಕೆ ಕೂಡ ದಿನ ಕಳೆದಂತೆ ಹೆಚ್ಚಾಗ್ತಾ ಇದೆ.  ಎನ್ ಆರ್ ಐ ವರನಿಗಾಗಿ ಮ್ಯಾಟ್ರಿಮೋನಿಯಾ ಮೊರೆ ಹೋಗ್ತಾರೆ.

ಅವರ ಆಸೆಯಂತೆ ಉತ್ತಮ ಉದ್ಯೋಗದಲ್ಲಿರುವ ವರ ಕೂಡ ಸಿಗ್ತಾನೆ. ಆತನ ಪೂರ್ವಾಪರ ವಿಚಾರಿಸಿ, ಅದ್ಧೂರಿಯಾಗಿ ಮಗಳ ಮದುವೆ ಮಾಡಿ ಕೊಡ್ತಾರೆ ಪಾಲಕರು. ಮಗಳು ವಿದೇಶಕ್ಕೆ ಹೋಗ್ತಿದ್ದಾಳೆಂಬ ನೋವಿನ ನಡುವೆಯೂ, ಸುಖವಾಗಿ ಬದುಕಲಿ ಎಂಬ ಹಾರೈಕೆ ಅವರದ್ದು. ವಿದೇಶದಲ್ಲಿರುವ ವರನನ್ನು ಪಡೆಯುವುದು ಹುಡುಗಿಯರ ಕನಸು ಕೂಡ. ಅದೊಂದು ಪ್ರೆಸ್ಟೀಜ್ ವಿಚಾರ. ಹಾಗಾಗಿಯೇ ಅನೇಕ ಹುಡುಗಿಯರು ಎನ್ ಆರ್ ಐ ವರ ಎಂದ್ರೆ ತಕ್ಷಣ ಒಪ್ಪಿಕೊಳ್ತಾರೆ.

ಮಗಳ ಮದುವೆಗಾಗಿ ಸಾಕಷ್ಟು ಹಣ ಖರ್ಚು ಮಾಡುವ ಪಾಲಕರು ಮದುವೆಯಾದ ಕೆಲವೇ ತಿಂಗಳ ನಂತ್ರ ಪಶ್ಚಾತಾಪ ಪಡ್ತಾರೆ. ಮೋಸಗಾರನ ಜೊತೆ ಮಗಳ ಮದುವೆ ಮಾಡಿದ್ದೇವೆಂಬ ಸತ್ಯ ಗೊತ್ತಾಗುತ್ತದೆ. ಎನ್ ಆರ್ ಐ ಜೊತೆ ಮದುವೆ, ನಂತ್ರ ಮೋಸ ಇದು ಮೊದಲು ಪಂಜಾಬ್ ಗೆ ಮಾತ್ರ ಮೀಸಲಾಗಿತ್ತು. ಈಗ ದೆಹಲಿ ಹಾಗೂ ಬಿಹಾರ್ ನಲ್ಲಿ ಕೂಡ ಇಂತ ಸುದ್ದಿಗಳು ಕೇಳಿ ಬರ್ತಾ ಇವೆ.

ಮದುವೆಯಾಗಿ ಗಂಡನ ಜೊತೆ ವಿದೇಶಕ್ಕೆ ತೆರಳುವ ಹಲವು ಹುಡುಗಿಯರು ಕೆಲವೇ ತಿಂಗಳಲ್ಲಿ ಪ್ರಾಣ ಉಳಿಸಿಕೊಂಡು ಭಾರತಕ್ಕೆ ವಾಪಸ್ ಬರ್ತಿದ್ದಾರೆ. ಮೋಸ ಮಾಡಿ ಮದುವೆಯಾಗುವ ಕೆಲ ಎನ್ ಆರ್ ಐ ಹುಡುಗ್ರು ಅಲ್ಲಿ ಮೊದಲೇ ಒಂದು ಮದುವೆಯಾಗಿರ್ತಾರೆ. ಹಣದಾಸೆಗೆ ಭಾರತದ ಹುಡುಗಿಯನ್ನೂ ಮದುವೆಯಾಗ್ತಾರೆ. ನಂತ್ರ ಭಾರತೀಯ ಮಹಿಳೆಗೆ ಚಿತ್ರ ಹಿಂಸೆ ನೀಡ್ತಾರೆ.

ದಿನದಿಂದ ದಿನಕ್ಕೆ ಮೋಸ ಹೋಗುವ ಭಾರತೀಯ ಮಹಿಳೆಯರ ಸಂಖ್ಯೆ ಹೆಚ್ಚಾಗ್ತಾ ಇದೆ. ಕೆಲವೇ ತಿಂಗಳಲ್ಲಿ 360 ಹುಡುಗಿಯರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ವಿದೇಶಾಂಗ ಸಚಿವಾಲಯ ಕೂಡ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸ್ತಾ ಇದೆ. ಎನ್ ಆರ್ ಐ ಅಥವಾ ಬೇರೆ ಯಾವುದೇ ವರನನ್ನು ಮದುವೆಯಾಗಿ ವಿದೇಶಕ್ಕೆ ಹೋಗುವ ಭಾರತೀಯ ಮಹಿಳೆಯರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...