alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿವಿಯಲ್ಲಿ ಸಿಗುತ್ತೆ ಆದರ್ಶ ಸೊಸೆ ‘ಸರ್ಟಿಫಿಕೇಟ್’

ಭೋಪಾಲ್: ಉತ್ತಮ ಸೊಸೆ ಆಗಲು ಏನ್ಮಾಡ್ಬೇಕು? ಉತ್ತಮ ಸೊಸೆ ಎಂದು ಸರ್ಟಿಫಿಕೇಟ್ ಕೊಡಬೇಕಾದವರು ಯಾರು? ಶತಶತಮಾನಗಳಿಂದ ಭಾರತೀಯ ಕುಟುಂಬ ಪದ್ಧತಿಯಲ್ಲಿ ಇದೊಂದು ಯಕ್ಷ ಪ್ರಶ್ನೆಯೇ ಆಗಿರುವಾಗ ಭೋಪಾಲ್ ನ ವಿಶ್ವವಿದ್ಯಾಲಯವೊಂದು ಆದರ್ಶ ಸೊಸೆ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದೆ.

ಇದೂ ಮಹಿಳಾ ಸಬಲೀಕರಣದ ಒಂದು ಭಾಗ ಎಂದು ಹೇಳಿಕೊಂಡಿರುವ ವಿವಿ ಮೂರು ತಿಂಗಳ ಕೋರ್ಸ್ ಅನ್ನು ಮುಂದಿನ ವರ್ಷದಿಂದಲೇ ಪ್ರಾರಂಭಿಸಲು ನಿರ್ಧರಿಸಿದೆ. ಡಿಗ್ರಿ ಕೋರ್ಸ್ ಮುಗಿಸಿದ ವಿದ್ಯಾರ್ಥಿನಿಯರು ಈ ಕೋರ್ಸ್ ಮಾಡಬಹುದಾಗಿದ್ದು, ಈಗಾಗಲೇ 30 ವಿದ್ಯಾರ್ಥಿನಿಯರ ದಾಖಲಾತಿಯೂ ಮುಗಿದಿದೆ.

ಮನಃಶಾಸ್ತ್ರ, ಸಮಾಜಶಾಸ್ತ್ರ, ಸ್ತ್ರೀ ಅಧ್ಯಯನ ಕೇಂದ್ರಗಳ ಅಡಿಯಲ್ಲಿ ಈ ತರಗತಿ, ಪರೀಕ್ಷೆಗಳು ನಡೆಯಲಿವೆ. ವಿವಿಯ ಕುಲಪತಿ ಡಿ.ಸಿ. ಗುಪ್ತಾ, ಇದೊಂದು ಅದ್ಭುತ ಪ್ರಯೋಗ. ಒಂದು ವಿಶ್ವವಿದ್ಯಾನಿಲಯವಾಗಿ ನಮಗೂ ಒಂದು ಸಾಮಾಜಿಕ ಹೊಣೆಗಾರಿಕೆ ಇರುತ್ತದೆ. ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣು ಮಕ್ಕಳಿಗೆ ಕುಟುಂಬ ಪದ್ಧತಿಯ ಸೂಕ್ಷ್ಮ, ಜವಾಬ್ದಾರಿಗಳನ್ನು ತಿಳಿಸಿಕೊಡುವ ಪ್ರಯತ್ನ ಇಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಇದೊಂದು ಬಕ್ವಾಸ್ ಐಡಿಯಾ ಎಂಬಂತಹ ಟೀಕೆಗಳೂ ಶೈಕ್ಷಣಿಕ, ಸಾಮಾಜಿಕ ವಲಯದಲ್ಲಿ ಕೇಳಿ ಬಂದಿವೆ. ಅಂತೂ ಇನ್ನು ಮುಂದೆ ಅತ್ತೆ-ಸೊಸೆ ಜಗಳವಾದಾಗ ಯುನಿವರ್ಸಿಟಿ ಕೋರ್ಸ್, ಸರ್ಟಿಫಿಕೇಟ್ ಕೂಡ ಒಂದು ನೆಪವಾಗದಿದ್ದರೆ ಅಷ್ಟೇ ಸಾಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...