alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳ ದಿನದಂದು ಈ ಗಿಫ್ಟ್ ಪಡೆಯಲು ಇಷ್ಟಪಡ್ತಾಳೆ ಹುಡುಗಿ

ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ವ್ಯಾಲೆಂಟೈನ್ಸ್ ಡೇಯನ್ನು ವಿಶೇಷವಾಗಿ ಆಚರಿಸಲು ಪ್ರೇಮಿಗಳು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಹೊಸದಾಗಿ ಪ್ರೀತಿಗೆ ಬಿದ್ದವರನ್ನು ಅನೇಕ ಪ್ರಶ್ನೆಗಳು ಕಾಡುತ್ತವೆ. ಪ್ರಿಯತಮೆಗೆ ಯಾವ ಗಿಫ್ಟ್ ನೀಡಬೇಕು ಎಂಬ ಪ್ರಶ್ನೆ ಕಾಡೋದು ಸಹಜ.

ವ್ಯಾಲೆಂಟೈನ್ಸ್ ಡೇ ದಿನ ಹುಡುಗಿಯರು ಎಂಥ ಗಿಫ್ಟ್ ಪಡೆಯಲು ಇಷ್ಟಪಡ್ತಾರೆ ಎಂಬುದನ್ನು ತಿಳಿದುಕೊಂಡು ಉಡುಗೊರೆ ನೀಡೋದು ಒಳ್ಳೆಯದು.

ಡೈಮಂಡ್ ಯಾರಿಗೆ ಇಷ್ಟವಿಲ್ಲ. ಸಾಮಾನ್ಯವಾಗಿ ಹುಡುಗಿಯರು ಡೈಮಂಡ್ ರಿಂಗ್ ಅಥವಾ ನೆಕ್ಲೆಸ್ ಅಂದ್ರೆ ಖುಷಿಯಾಗ್ತಾರೆ. ಹೌದು ಹಂಗತ ವ್ಯಾಲೆಂಟೈನ್ಸ್ ಡೇ ದಿನ ಯಾವುದೇ ಹುಡುಗಿ ಡೈಮಂಡ್ ರಿಂಗ್ ಅಥವಾ ನೆಕ್ಲೆಸ್ ಪಡೆಯಲು ಇಷ್ಟಪಡುವುದಿಲ್ಲ. ಡೈಮಂಡ್ ಆಭರಣಕ್ಕಿಂತ ಪ್ರೇಮಿಯ ಒಂದು ಪ್ರೀತಿಯ ಅಪ್ಪುಗೆ ಅಥವಾ ಪ್ರೀತಿಗೆ ಸಂಬಂಧಿಸಿ ಉಡುಗೊರೆ ಹುಡುಗಿಯರಿಗೆ ಇಷ್ಟವಾಗುತ್ತದೆ.

ಡೇಲಿ ಮೇಲ್ ವರದಿ ಪ್ರಕಾರ ಶೇಕಡಾ 85ರಷ್ಟು ಹುಡುಗಿಯರು ತಮ್ಮ ಸಂಗಾತಿ ತಮ್ಮ ಮೇಲೊಂದು ಸುಂದರ ಕವಿತೆ ಬರೆಯಲೆಂದು ಬಯಸುತ್ತಾರಂತೆ. ಶೇಕಡಾ ಐವತ್ತರಷ್ಟು ಮಹಿಳೆಯರು ಕಣ್ಣಲ್ಲಿ ಕಣ್ಣಿಟ್ಟು ಸಂಗಾತಿ ನಾಲ್ಕು ಪ್ರೀತಿಯ ಮಾತುಗಳನ್ನಾಡಿದ್ರೆ ಅದೇ ಅತ್ಯಮೂಲ್ಯ ಉಡುಗೊರೆ ಎಂದಿದ್ದಾರೆ.

ಬ್ರಿಟಿಷ್ ಹಾರ್ಟ್ ಫೌಂಡೇಷನ್ ಅಡಿಯಲ್ಲಿ ನಡೆಸಿದ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 10ರಲ್ಲಿ 9 ಮಹಿಳೆಯರು ಸಂಗಾತಿ ಉಡುಗೊರೆ ರೂಪದಲ್ಲಿ ಅಪ್ಪುಗೆ, ಮುತ್ತು, ಲವ್ ಯು ಕಾರ್ಡ್ ನೀಡಬೇಕೆಂದು ಹೇಳಿದ್ದಾರೆ. ಕೇವಲ ಎರಡು ನಿಮಿಷವಾದ್ರೂ ಸಂಗಾತಿ ಗಮನ ಸಂಪೂರ್ಣ ನನ್ನ ಮೇಲಿರಲಿ. ಕಣ್ಣಲ್ಲಿ ಕಣ್ಣಿಟ್ಟು ನನ್ನನ್ನು ಪ್ರೀತಿಸಲಿ ಎಂದು ಮಹಿಳೆಯರು ಬಯಸುತ್ತಾರಂತೆ.

ಶೇಕಡಾ ಮೂರರಷ್ಟು ಮಹಿಳೆಯರು ಸುಂದರ ಪ್ರದೇಶಕ್ಕೆ ಸಂಗಾತಿ ಪ್ರವಾಸಕ್ಕೆ ಕರೆದುಕೊಂಡು ಹೋಗಲಿ ಎಂದಿದ್ದರಂತೆ. ತಜ್ಞರ ಪ್ರಕಾರ ಪ್ರೇಮಿಗಳ ದಿನದಂದು ದೊಡ್ಡ ಉಡುಗೊರೆ ನೀಡಿ ಸಂಗಾತಿ ಪ್ರೀತಿಗಳಿಸುವ ಅಗತ್ಯವಿಲ್ಲ. ಸಣ್ಣ ಸಣ್ಣ ವಸ್ತು, ಅಪ್ಪಿಗೆ, ಮುತ್ತು ಕೂಡ ಪ್ರೀತಿಯನ್ನು ದುಪ್ಪಟ್ಟು ಮಾಡುತ್ತದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...