alex Certify
ಕನ್ನಡ ದುನಿಯಾ       Mobile App
       

Kannada Duniya

ಶುಗರ್ ಟೆಸ್ಟ್ ಮಾಡೋಕೆ ಇನ್ಮುಂದೆ ಲೆನ್ಸ್ ಸಾಕು…!

ಡಯಾಬಿಟೀಸ್ ಇರೋರಿಗೆ ಡಯಟ್ ಮಾಡೋದು, ಸ್ವೀಟ್ ತಿನ್ನದೇ ಇರೋದು, ಟ್ಯಾಬ್ಲೆಟ್ ತೊಗೊಳ್ಳೋದು ಇವೆಲ್ಲದಕ್ಕಿಂತ ನೋವಿನ ಸಂಗತಿ ಎಂದರೆ ಆಗಾಗ್ಗೆ ರಕ್ತ ಪರೀಕ್ಷೆ ಮಾಡಿಸೋದು ಅಥವಾ ಮಾಡಿಕೊಳ್ಳೋದು. ಸೂಜಿಯಿಂದ ಚುಚ್ಚಿ ರಕ್ತ ತೆಗೆದು ಅದರಿಂದ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಪರೀಕ್ಷಿಸಿಕೊಳ್ಳೋದು. ಅದ್ರೆ ಇನ್ಮುಂದೆ  ಅಂಥ ಸಂಕಟ ಇರೋದಿಲ್ಲ.

ಹೌದು….ಅಲ್ಸನ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನೋಲಜಿ ಯ ವಿಜ್ಞಾನಿಗಳು ಡಯಾಬಿಟೀಸ್ ರೋಗಿಗಳಿಗಾಗಿ ಕಾಂಟಾಕ್ಟ್ ಲೆನ್ಸ್ ಅನ್ನು ಕಂಡುಹಿಡಿದಿದ್ದಾರೆ. ಈ ಲೆನ್ಸ್ ಕಣ್ಣಿಗೆ ಹಾಕಿಕೊಂಡರೆ ಸಾಕು ಕಣ್ಣಿಂದ ಬರುವ ನೀರಿನಿಂದ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಪತ್ತೆಹಚ್ಚಬಹುದೆಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಸ್ಮಾರ್ಟ್ ಕಾಂಟಾಕ್ಟ್ ಲೆನ್ಸ್ ಫ್ಲೆಕ್ಸಿಬಲ್ ಆಗಿದ್ದು, ಇದು ಎಲೆಕ್ಟ್ರಿಕ್ ತರಂಗಗಳನ್ನು ಎಲ್ ಇ ಡಿ ಡಿವೈಸ್ ಗೆ ಕಳುಹಿಸುತ್ತೆ. ಇದರಿಂದ ಗ್ಲೂಕೋಸ್ ಪ್ರಮಾಣವನ್ನು ಸುಲಭವಾಗಿ ನೋವಿಲ್ಲದೇ ಪರೀಕ್ಷಿಸಿಕೊಳ್ಳಬಹುದಾಗಿದೆ. ಆದರೆ ಈ ಲೆನ್ಸ್ ಅನ್ನು ಮನುಷ್ಯರ ಮೇಲಿನ್ನೂ ಪರೀಕ್ಷೆ ಮಾಡಲಾಗಿಲ್ಲವಾದರೂ ಇಲಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...