alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಹೆಲಿಕಾಪ್ಟರ್ ನಲ್ಲಿ ಗಂಡನ ಮನೆಗೆ ಬಂದ ವಧು

ಒಬ್ಬೊಬ್ಬರಿಗೆ ಒಂದೊಂದು ಕನಸಿರುತ್ತದೆ. ತಾಯಿಯೊಬ್ಬಳು ಮನೆಗೆ ಬರುವ ಸೊಸೆ ಹೆಲಿಕಾಪ್ಟರ್ ನಲ್ಲಿ ಬರಬೇಕೆಂದು ಕನಸು ಕಂಡಿದ್ದಳು. ಈ ಕನಸನ್ನು ಆಕೆ ವೈದ್ಯೆ ಮಗಳು ಈಡೇರಿಸಿದ್ದಾಳೆ. ತನ್ನ ಸಹೋದರನ ವಧುವನ್ನು ಹೆಲಿಕಾಪ್ಟರ್ ಮೂಲಕ ಮನೆಗೆ ಕರೆ ತಂದಿದ್ದಾಳೆ.

ಘಟನೆ ಸೋನಿಪತ್ ನಲ್ಲಿ ನಡೆದಿದೆ. ಖರಖೌದ ಗ್ರಾಮದಿಂದ ದೆಹಲಿಯ ಶಾಹಪುರಕ್ಕೆ ವರ ರೋಹಿತ್ ಸಹೋದರಿ ಹೆಲಿಕಾಪ್ಟರ್ ಬುಕ್ ಮಾಡಿದ್ದಾಳೆ. ಮೂರು ಲಕ್ಷ ರೂಪಾಯಿ ಖರ್ಚು ಮಾಡಿ ಈ ಹೆಲಿಕಾಪ್ಟರ್ ಬುಕ್ ಮಾಡಿದ್ದು, ಗ್ರಾಮಕ್ಕೆ ಹೆಲಿಕಾಪ್ಟರ್ ಬರ್ತಿದ್ದಂತೆ ಗ್ರಾಮದ ಜನರು ನೋಡಲು ಮುಗಿ ಬಿದ್ದಿದ್ದಾರೆ.

ಮಾಹಿತಿ ಪ್ರಕಾರ ರೋಹಿತ್ ಸಹೋದರಿ ಮಂಜು ರೋಹ್ಟಕ್ ನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡ್ತಿದ್ದಾಳೆ. ಆಕೆ ಪತಿ ಇಂಜಿನಿಯರ್. ರೋಹಿತ್ ತಾಯಿ-ತಂದೆ ಮೊದಲ ಬಾರಿ ವಧು ಮನೆಗೆ ಹೆಲಿಕಾಪ್ಟರ್ ನಲ್ಲಿ ಬರಬೇಕೆಂದು ತಮ್ಮ ಆಸೆ ವ್ಯಕ್ತಪಡಿಸಿದ್ದರು. ಮದುವೆ ನಿಶ್ಚಯವಾದ ಮೇಲೂ ಇದನ್ನೇ ಹೇಳುತ್ತಿದ್ದರು. ತಾಯಿ-ತಂದೆ ಆಸೆ ಈಡೇರಿಸುವ ಹೊಣೆ ಹೊತ್ತ ಮಂಜು ತನ್ನ ಅತ್ತಿಗೆಯನ್ನು ಹೆಲಿಕಾಪ್ಟರ್ ನಲ್ಲಿ ಕರೆ ತಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...