alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆ ಗೋಚರವಾಗಲಿದೆ ವರ್ಷದ ಅತಿ ದೊಡ್ಡ ಸೂಪರ್ ಮೂನ್…!

ನಾಳೆ ವರ್ಷದ ಮೊದಲ ಸೂಪರ್ ಮೂನ್ ಗೋಚರವಾಗಲಿದೆ. ಅತಿ ದೊಡ್ಡ ಗಾತ್ರದಲ್ಲಿ ಚಂದ್ರ ಆಗಸದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಹುಣ್ಣಿಮೆಯ ಚಂದ್ರ ಭೂಮಿಗೆ ಅತಿ ಸಮೀಪದಲ್ಲಿ ಗೋಚರಿಸಲಿದ್ದಾನೆ.

ಸಾಮಾನ್ಯ ಚಂದ್ರನಿಗಿಂತ ಈ ಸೂಪರ್ ಮೂನ್ ಶೇ.14ರಷ್ಟು ದೊಡ್ಡದಾಗಿರಲಿದೆ. ಹಾಗೂ ಶೇ.30ರಷ್ಟು ಪ್ರಕಾಶಮಾನವಾಗಿರಲಿದೆ ಅಂತಾ ನಾಸಾ ತಿಳಿಸಿದೆ. ಸೂಪರ್ ಮೂನ್ ಹಿನ್ನೆಲೆಯಲ್ಲಿ ಗೋವಾದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕಡಲ ನಗರಿಯಲ್ಲಿ ನ್ಯೂ ಇಯರ್ ಸಂಭ್ರಮ ಜೋರಾಗಿದೆ. ಬೀಚ್ ಗಳ ಬಳಿ ಪ್ರವಾಹ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜನವರಿ 31ರಂದು ಕೂಡ ಸೂಪರ್ ಮೂನ್ ಗೋಚರವಾಗಲಿದೆ.

ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುತ್ತದೆ. ಹಾಗಾಗಿ ಯಾವುದೇ ರೀತಿಯ ಜಲ ಕ್ರೀಡೆಗಳು ಮತ್ತು ಇತರ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧಿಸಲಾಗಿದೆ. ಸಮುದ್ರ ತಟದಲ್ಲಿ ವಾಸವಾಗಿರುವವರು ಕೂಡ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...