alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ನೋಟ್ ಗಳಲ್ಲಿರೋದು ಚಿಪ್ ಅಲ್ಲ, ರೇಡಿಯೋ ಆಕ್ಟಿವ್ ಇಂಕ್..!?

radioactive-ink

ನವದೆಹಲಿ: ಕೇಂದ್ರ ಸರ್ಕಾರ 500 ರೂ. ಹಾಗೂ 1000 ರೂ ಮುಖಬೆಲೆಯ ನೋಟ್ ಗಳನ್ನು ರದ್ದುಪಡಿಸಿದ ಬಳಿಕ, 2000 ರೂ. ಮುಖಬೆಲೆಯ ನೋಟ್ ಜಾರಿಗೆ ತಂದಿದೆ.

ಈ ನೋಟ್ ಗಳಲ್ಲಿ ಮೈಕ್ರೋ ಚಿಪ್ ಅಳವಡಿಸಲಾಗಿದೆ. ಜಾಸ್ತಿ ನೋಟ್ ಗಳನ್ನು ಒಂದೇ ಕಡೆ ಸಂಗ್ರಹಿಸಿದಾಗ, ಮಾಹಿತಿ ಹಂಚಿಕೆಯಾಗುವ ವ್ಯವಸ್ಥೆ ಮಾಡಲಾಗಿದೆ ಎಂದೆಲ್ಲಾ ಹೇಳಲಾಗಿತ್ತಾದರೂ, ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಸ್ಪಷ್ಟನೆ ನೀಡಿ, ಹಾಗೆಲ್ಲಾ ಏನೂ ಚಿಪ್ ಅಳವಡಿಸಿಲ್ಲ ಎಂದು ತಿಳಿಸಲಾಗಿತ್ತು.

ಕಳೆದ ಕೆಲವು ದಿನಗಳಿಂದ ಐ.ಟಿ. ಇಲಾಖೆ ಹಾಗೂ ಪೊಲೀಸ್ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಮೊತ್ತದ ಹೊಸ ನೋಟ್ ಗಳು ಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹೊಸ ನೋಟ್ ಗಳಲ್ಲಿ ಮೈಕ್ರೋ ಚಿಪ್ ಬದಲಿಗೆ ರೇಡಿಯೋ ಆಕ್ಟಿವ್ ಇಂಕ್ ಬಳಸಲಾಗಿದೆ. ಹಾಗಾಗಿ, ಹೆಚ್ಚು ನೋಟ್ ಗಳು ಸಂಗ್ರಹವಾದ ಬಗ್ಗೆ ಇಲಾಖೆಗಳಿಗೆ ಮಾಹಿತಿ ರವಾನೆಯಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಹೊಸದಾಗಿ ಬಿಡುಗಡೆ ಮಾಡಲಾಗಿರುವ 2000 ರೂ. ಹಾಗೂ 500 ರೂ. ಮುಖಬೆಲೆಯ ನೋಟ್ ಗಳಲ್ಲಿ P32 ರೇಡಿಯೋ ಆಕ್ಟಿವ್ ಇಂಕ್ ಬಳಸಲಾಗಿರುವುದರಿಂದ ಬ್ಲಾಕ್ ಮನಿ ಪತ್ತೆಯಾಗುತ್ತಿದೆ ಎಂದೆಲ್ಲಾ ಚರ್ಚೆಗಳು ನಡೆದಿವೆ.

ಇದು ಜನಸಾಮಾನ್ಯರಲ್ಲಿ ಕುತೂಹಲಕ್ಕೆ ಕಾರಣವಾಗಿದ್ದರೆ, ಕಾಳಧನಿಕರಿಗೆ ಹೊಸನೋಟು ಸಂಗ್ರಹಿಸಿಡುವ ಪೀಕಲಾಟ ಶುರುವಾಗಿದೆ. ಸದ್ಯಕ್ಕೆ ಆರ್.ಬಿ.ಐ., ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡುವ ಗೋಜಿಗೆ ಹೋಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...