alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ಹೊಸ ಎಂಗೇಜ್ಮೆಂಟ್ ಟ್ರೆಂಡ್…!

ಸಮಯ ಬದಲಾದಂತೆ ಮದುವೆ, ಸಂಪ್ರದಾಯದಲ್ಲೂ ಬದಲಾವಣೆಯಾಗ್ತಿದೆ. ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿ ಉಂಗುರ ಬೆರಳಿಗೆ ಉಂಗುರ ತೊಡಿಸಲಾಗ್ತಾಯಿತ್ತು. ಆದ್ರೀಗ ಉಂಗುರ ಬೆರಳಿಗೆ ಎಂಗೇಜ್ಮೆಂಟ್ ರಿಂಗ್ ತೊಡಿಸಬೇಕಾಗಿಲ್ಲ. ಜ್ಯೋತಿಷ್ಯಗಳು ತಮ್ಮ ನಿಯಮಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.

ವಧು-ವರರ ಜಾತಕ, ನಕ್ಷತ್ರ ಎಲ್ಲವನ್ನೂ ನೋಡಿ ಇಬ್ಬರಿಗೂ ಸರಿ ಹೊಂದುವ ಹವಳ ಅಥವಾ ವಜ್ರ ಸೇರಿದಂತೆ ಉಂಗುರವನ್ನು ಆಯ್ಕೆ ಮಾಡಲಾಗುತ್ತದೆ. ನಂತ್ರ ಅದು ಯಾವ ಬೆರಳಿಗೆ ಸೂಕ್ತ ಎಂಬುದನ್ನು ಜಾತಕ ನೋಡಿ ನಿರ್ಧಾರ ಮಾಡಲಾಗುತ್ತದೆ. ಬಹುಕಾಲ ಒಂದಾಗಿ ಬಾಳಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತದೆಯಂತೆ.

ಬಂಗಾರ, ವಜ್ರದ ಜೊತೆ ಹವಳ, ಪಚ್ಚೆ, ನೀಲಮಣಿ ಉಂಗುರಗಳನ್ನು ಈಗ ಹಾಕಲಾಗ್ತಿದೆ. ಈ ಉಂಗುರಗಳನ್ನು ಅದಕ್ಕೆ ಹೊಂದುವ ಬೆರಳಿಗೆ ಹಾಕಬೇಕು. ಜಾತಕ ಕೂಡಿದ್ರೆ ನಿಶ್ಚಿತಾರ್ಥ ಮದುವೆ ನಿಜ. ಕೆಲವೊಮ್ಮೆ ಜಾತಕದಲ್ಲಿರುವ ಸಣ್ಣಪುಟ್ಟ ದೋಷಗಳು ಮದುವೆಗೆ ಅಡ್ಡಿ ಮಾಡುವುದಿಲ್ಲ. ಆದ್ರೆ ಸಂಬಂಧ ಹಾಳು ಮಾಡುತ್ತವೆ. ಅದನ್ನು ಸರಿಪಡಿಸಲು ರತ್ನಗಳ ಬಳಕೆ ಅಗತ್ಯ. ರತ್ನಗಳನ್ನು ಸೂಕ್ತ ಬೆರಳಿಗೆ ಹಾಕಬೇಕು. ಇದೇ ಕಾರಣಕ್ಕೆ ಜನರು ನಿಶ್ಚಿತಾರ್ಥಕ್ಕೂ ಮುನ್ನ ಪಂಡಿತರ ಸಲಹೆ ಪಡೆಯುತ್ತಿದ್ದಾರಂತೆ. ಉಂಗುರ ಬೆರಳಿನ ಬದಲು ಬೇರೆ ಬೆರಳುಗಳಿಗೂ ಉಂಗುರ ತೊಡಿಸುತ್ತಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...