alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಆಪ್ ನಲ್ಲಿ ಬಾಡಿಗೆಗೆ ಸಿಗ್ತಾರೆ ಬಾಯ್ಫ್ರೆಂಡ್

ಒಂಟಿಯಾಗಿದ್ದಾಗ ಖಿನ್ನತೆ ಕಾಡೋದು ಮಾಮೂಲಿ. ಬಾಯ್ ಫ್ರೆಂಡ್ ಇಲ್ದೆ ಸಿಂಗಲ್ ಆಗಿರುವ ಹುಡುಗಿಯರಿಗೆ ಒಂದು ಖುಷಿ ಸುದ್ದಿಯಿದೆ. ಈಗ ಎಲ್ಲವೂ ಬಾಡಿಗೆಗೆ ಸಿಗುತ್ತದೆ. ವಿದೇಶದಂತೆ ಭಾರತದಲ್ಲೂ ಇನ್ಮುಂದೆ ಬಾಯ್ ಫ್ರೆಂಡ್ಸ್ ಬಾಡಿಗೆಗೆ ಸಿಗ್ತಾರೆ. ಯಸ್, ಮಾರುಕಟ್ಟೆಗೆ ಹೊಸ ಆ್ಯಪ್ ಪ್ರವೇಶ ಮಾಡಿದೆ.

ಶುಕ್ರವಾರ ರೆಂಟ್ ಎ ಬಾಯ್ ಫ್ರೆಂಡ್ (RABF) ಹೆಸರಿನ ಆ್ಯಪ್ ಬಿಡುಗಡೆ ಮಾಡಲಾಗಿದೆ. ಮುಂಬೈ ಹಾಗೂ ಪುಣೆಯಲ್ಲಿ ಈ ಆ್ಯಪ್ ಸದ್ಯ ಕಾರ್ಯನಿರ್ವಹಿಸಲಿದೆ. ಒಂಟಿತನ ಹಾಗೂ ಖಿನ್ನತೆ ಕಡಿಮೆ ಮಾಡುವುದು ಈ ಆ್ಯಪ್ ಉದ್ದೇಶವಾಗಿದೆ. ಹುಡುಗಿಯರನ್ನು ಇದ್ರಲ್ಲಿ ಸೇರಿಸಲಾಗಿಲ್ಲ. ರೆಂಟ್ ಎ ಗರ್ಲ್ ಭಾರತಕ್ಕೆ ಸೂಕ್ತವಲ್ಲ.

ಒಂಟಿ ಹುಡುಗಿಯರು ಉಪಹಾರ, ಊಟ, ಪಾರ್ಟಿಗಳಿಗೆ ಬಾಡಿಗೆ ಬಾಯ್ ಫ್ರೆಂಡ್ ಕರೆದುಕೊಂಡು ಹೋಗಬಹುದು. ಈ ಆ್ಯಪನ್ನು ಭಾರತದ ಕೌಶಲ್ ಪ್ರಕಾಶ್ ಸಿದ್ಧಪಡಿಸಿದ್ದಾರೆ. ಹುಡುಗಿಯರ ಜೊತೆ ಬರುವ ಬಾಡಿಗೆ ಹುಡುಗ್ರು ಯಾವುದೇ ಖಾಸಗಿ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಹಾಗೆ ಶಾರೀರಿಕ ಸಂಬಂಧ ಬೆಳೆಸುವುದಿಲ್ಲ. ಹುಡುಗಿಯರ ಖಿನ್ನತೆ ದೂರ ಮಾಡುವುದು ಮಾತ್ರ ಅವ್ರ ಉದ್ದೇಶವಾಗಿರುತ್ತದೆ. 22-25 ವರ್ಷದೊಳಗಿನ ಹುಡುಗ್ರು ಇದ್ರಲ್ಲಿ ಕೆಲಸ ಮಾಡಲಿದ್ದಾರೆ. ಹುಡುಗಿಯರು ಮನೋವೈದ್ಯರ ಜೊತೆಯೂ ಮಾತನಾಡಬಹುದು. 15-20 ನಿಮಿಷದ ಮಾತಿಗೆ 500 ರೂಪಾಯಿ ನೀಡಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...