alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವನ ಸಂಗಾತಿ ಮುಂದೆ ಎಂದೂ ಈ ಗುಟ್ಟು ಬಿಚ್ಚಿಡಬೇಡಿ

ಪ್ರಾಮಾಣಿಕತೆ ಹಾಗೂ ಸತ್ಯ ಸಂಬಂಧವನ್ನು ಗಟ್ಟಿ ಮಾಡುತ್ತದೆ. ನಮ್ಮನ್ನು ಪ್ರೀತಿಸುವವರು ಹಾಗೂ ನಾವು ಪ್ರೀತಿ ಮಾಡುವವರು ಸತ್ಯವನ್ನು ಹೇಳಬೇಕು. ಪ್ರಾಮಾಣಿಕರಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ನಾವು ಪ್ರೀತಿ ಮಾಡುವವರ ಬಳಿ ಎಲ್ಲವನ್ನೂ ಹೇಳಿಕೊಳ್ತೇವೆ.

ರಹಸ್ಯಗಳು, ನೋವು, ಖುಷಿ ಎಲ್ಲವೂ ನಮ್ಮವರ ಮುಂದೆ ಹೇಳಿಕೊಂಡಲ್ಲಿ ಇಬ್ಬರ ನಡುವಿನ ಅಂತರ ಕಡಿಮೆಯಾಗಿ ಪ್ರೀತಿ ಹೆಚ್ಚುತ್ತದೆ. ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡುವವರ ಮುಂದೆಯೂ ಕೆಲವೊಂದು ವಿಷ್ಯಗಳನ್ನು ಹೇಳದಿರುವುದು ಉತ್ತಮ. ಅದು ಸಂಬಂಧ ಗಟ್ಟಿಗೊಳಿಸುವ ಬದಲು ಹಾಳು ಮಾಡುತ್ತದೆ.

ಮದುವೆಗಿಂತ ಮೊದಲು ಎಷ್ಟು ಹುಡುಗರನ್ನು ನೀನು ಪ್ರೀತಿಸಿದ್ದೆ ಎಂಬ ಪ್ರಶ್ನೆ ಮುಜುಗರದ ಜೊತೆ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒಬ್ಬ ಹುಡುಗ ಈ ಪ್ರಶ್ನೆ ಕೇಳಿದ್ರೆ ಆತನ ಹಾಗೂ ಆತನ ಉದ್ದೇಶವೇನೆಂಬುದನ್ನು ಅರಿತು ಜಾಗರೂಕರಾಗಿರಿ.

ನಿಮ್ಮ ಮಾಜಿ ಸಂಗಾತಿ ಜೊತೆಗೆ ಕಳೆದ ಕೆಲ ಘಟನೆಗಳು ನಿಮ್ಮನ್ನು ಕಾಡಬಹುದು. ಅವರ ಜೊತೆ ಕಳೆದ ಸುಂದರ ಕ್ಷಣಗಳು ನೆನಪಾಗಬಹುದು. ಹಾಗಂತ ನೀವು ಅವರ ಜೊತೆ ಮತ್ತೆ ಸಂಸಾರ ನಡೆಸುತ್ತೀರೆಂದಲ್ಲ. ಹಾಗಾಗಿ ಈ ವಿಷ್ಯವನ್ನು ನಿಮ್ಮ ಸಂಗಾತಿ ಬಳಿ ಹೇಳುವ ಅಗತ್ಯವಿಲ್ಲ.

ನಿಮ್ಮ ಮಾಜಿ ಸಂಗಾತಿ ನಿಮಗೆ ಹೊಡೆದಿದ್ದರೆ ಅಥವಾ ನಿಮ್ಮ ಜೊತೆ ಗಲಾಟೆ ಮಾಡಿದ್ದರೆ ಅದನ್ನು ಈಗಿನ ಸಂಗಾತಿಗೆ ಹೇಳಬೇಕಾಗಿಲ್ಲ. ಕೆಟ್ಟ ಘಟನೆಗಳನ್ನು ನೆನಪು ಮಾಡಿಕೊಳ್ಳುವುದು ತಪ್ಪು. ಹಾಗೆ ಅದನ್ನು ಬೇರೆಯವರಿಗೆ ಹೇಳಬೇಕಾಗಿಲ್ಲ.

ಪ್ರೇಮಿಗಳು ಹೊಸ ಹೊಸ ಕನಸುಗಳನ್ನು ಕಾಣ್ತಾರೆ. ಮುಂದಿನ ಜೀವನ ಹೀಗಿರಬೇಕು, ಹಾಗಿರಬೇಕು ಎಂದುಕೊಳ್ತಾರೆ. ಆದ್ರೆ ಪ್ರೀತಿ ಮುರಿದ ತಕ್ಷಣ ಕನಸು ಮುರಿದು ಬೀಳುತ್ತೆ. ಮಾಜಿ ಜೊತೆ ಕಂಡ ಕನಸನ್ನು ಪತಿ ಜೊತೆ ಹಂಚಿಕೊಳ್ಳುವ ಅಗತ್ಯವಿಲ್ಲ. ಅದನ್ನು ಮರೆತು ಮುಂದೆ ಹೋದಲ್ಲಿ ಮಾತ್ರ ಜೀವನ ಸುಖವಾಗಿರಲು ಸಾಧ್ಯ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...