alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವೃದ್ಧ ಮಹಿಳೆಯ ಆರೋಗ್ಯದ ಗುಟ್ಟು ಸಿಗರೇಟು..!

batuli

ಧೂಮಪಾನ ಆರೋಗ್ಯಕ್ಕೆ ಹಾನಿಕರ. ವೈದ್ಯಕೀಯ ವಿಜ್ಞಾನ ಕೂಡ ಅದರಿಂದ ದೂರ ಇರುವಂತೆ ಸಲಹೆ ನೀಡುತ್ತಿದೆ. ಸಿಗರೇಟ್ ಪ್ಯಾಕ್  ಮೇಲೆ ಕೂಡ ಧೂಮಪಾನದಿಂದ ಸಾವು ಸಂಭವಿಸುತ್ತದೆ ಎಂದು ಎಚ್ಚರಿಕೆಯ ಸಂದೇಶ ನೀಡಲಾಗುತ್ತದೆ. ಆದ್ರೆ ವೃದ್ಧೆಯೊಬ್ಬಳು 95 ವರ್ಷಗಳಿಂದ ದಿನಕ್ಕೆ 30 ಸಿಗರೇಟ್ ಸೇದುತ್ತ ಬಂದಿದ್ದಾಳೆ. ಅವಳ ಆರೋಗ್ಯ ಮಾತ್ರ ಹಾಗೆ ಇದೆ.

ನೇಪಾಳದಲ್ಲಿ ವಾಸಿಸುವ ವೃದ್ಧೆ ಬತುಲಿ ವಯಸ್ಸು ಈಗ 112 ವರ್ಷ. ಆಕೆಗೆ 17 ವರ್ಷವಿರುವಾಗ ಆಕೆ ಸಿಗರೇಟು ಸೇದಲು ಶುರುಮಾಡಿದ್ದಾಳಂತೆ. ಈಗಲೂ ದಿನಕ್ಕೆ  30 ಸಿಗರೇಟ್ ಸುಡ್ತಾಳಂತೆ. ಇಷ್ಟು ವರ್ಷ ಬಾಳಲು ಸಿಗರೇಟ್ ಕಾರಣ ಎನ್ನುತ್ತಾಳೆ ವೃದ್ಧೆ.

ಬತುಲಿ ತನ್ನದೆ ಶೈಲಿಯಲ್ಲಿ ಸಿಗರೇಟ್ ಸೇದುತ್ತಾಳೆ. ಇದರಿಂದ ದೇಹದೊಳಕ್ಕೆ ನಿಕೋಟಿನ್ ಅಂಶ ಕಡಿಮೆ ಪ್ರಮಾಣದಲ್ಲಿ ಪ್ರವೇಶ ಮಾಡುತ್ತದೆ ಎನ್ನುತ್ತಾಳೆ ಆಕೆ. ಎರಡು ಬೆರಳುಗಳ ಮಧ್ಯೆ ಸಿಗರೇಟ್ ಹಿಡಿಯುವ ಬದಲು ಮುಷ್ಠಿಯೊಳಗೆ ಸಿಗರೇಟ್ ಹಿಡಿದು ಸೇದುತ್ತಾಳೆ.

ಮಾರುಕಟ್ಟೆಯಲ್ಲಿ ಸಿಗುವ ಸಿಗರೇಟ್ ಗಿಂತ ಎಲೆಗಳಿಂದ ಮಾಡಿದ ಬೀಡಿ ಸೇದಿ ಎಂದು ಬತುಲಿ ಸಲಹೆ ನೀಡುತ್ತಾಳೆ. 80 ವರ್ಷಗಳ ಹಿಂದೆ ಆಕೆಯ ಗಂಡ ಕೆಲಸ ಹುಡುಕಿಕೊಂಡು ಭಾರತಕ್ಕೆ ಬಂದವನು ಇನ್ನೂ ವಾಪಸ್ ಬಂದಿಲ್ಲ. ಆಕೆ ದೊಡ್ಡ ಮಗನ ವಯಸ್ಸು ಈಗ 85 ವರ್ಷ.

ಹಿಂದಿನ ವರ್ಷ ನೇಪಾಳದಲ್ಲಿ ಕಾಣಿಸಿಕೊಂಡ ಭೂಕಂಪದಿಂದಾಗಿ ಬತುಲಿ ಮನೆ ಕಳೆದುಕೊಂಡಿದ್ದಾಳೆ. ದೇವಸ್ಥಾನದಲ್ಲಿ ಸದ್ಯ ವಾಸಿಸುತ್ತಿರುವ ಆಕೆ, ತನ್ನೆಲ್ಲ ಕೆಲಸವನ್ನು ತಾನೇ ಮಾಡಿಕೊಳ್ಳುತ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...