alex Certify
ಕನ್ನಡ ದುನಿಯಾ       Mobile App
       

Kannada Duniya

ಉಗುರು ಕಚ್ಚುವ ಅಭ್ಯಾಸವಿದೆಯಾ? ಹಾಗಾದ್ರೆ ತಪ್ಪದೇ ಓದಿ ಈ ಸುದ್ದಿ

ಸಣ್ಣವರಿದ್ದಾಗ, ಅಷ್ಟೇ ಏಕೆ ದೊಡ್ಡವರೂ ಕೂಡ ಆಗಾಗ ಉಗುರು ಕಚ್ಚುವುದನ್ನು ನೋಡಿರುತ್ತೇವೆ. ಒತ್ತಡದಲ್ಲಿ ಅಥವಾ ಕೆಲವೊಮ್ಮೆ ಅದನ್ನೇ ರೂಢಿ ಮಾಡಿಕೊಂಡವರು ಉಗುರು ಕಚ್ಚುತ್ತಾರೆ. ಹೀಗೆ ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ ಆಗಿರುತ್ತಾರೆ ಎಂದು ವರದಿಯೊಂದು ಹೇಳಿದೆ.

ಈ ಕುರಿತ ಅಧ್ಯಯನದಲ್ಲಿ ಉಗುರು ಕಚ್ಚುವವರು ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬಲ್ಲವರಾಗಿರುತ್ತಾರೆ ಎಂಬ ಮಾಹಿತಿ ಗೊತ್ತಾಗಿದೆ. ಉಗುರು ಕಚ್ಚುವುದು, ತಲೆ ಕೆರೆದುಕೊಳ್ಳುವುದು, ಬೆರಳ ತುದಿಯ ಚರ್ಮ ಕಡಿಯುವುದು ಮೊದಲಾದ ಸ್ವಭಾವ ಹೊಂದಿದ್ದ ಹಾಗೂ ಹೊಂದಿರದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಸರಳ, ಕ್ಲಿಷ್ಟ, ಮೊದಲಾದ ರೀತಿಯ ಕೆಲಸವನ್ನು ಅವರಿಗೆ ವಹಿಸಲಾಗಿತ್ತು ಅದರಲ್ಲಿ ಉಗುರು ಕಚ್ಚುವವರು ತಮಗೆ ನೀಡಲಾಗಿದ್ದ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ಈ ಸ್ವಭಾವ ಹೊಂದಿರದವರು ಒತ್ತಡ ತಡೆದುಕೊಳ್ಳಲಿಕ್ಕೆ ಸಾಧ್ಯವಾಗದೇ ಉಗುರು ಕಚ್ಚಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು ಎಂದು ಹೇಳಲಾಗಿದೆ. ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ ಆಗಿದ್ದಾರೆಂಬುದು ಅಧ್ಯಯನದಲ್ಲಿ ತಿಳಿದುಬಂದಿದ್ದು, ಇಂತವರಿನ್ನು ಖುಷಿಪಡಬಹುದು. ಕೆಲವರು ತಮಗೆ ವಹಿಸಿದ ಕೆಲಸ ಪೂರ್ಣಗೊಳಿಸದಿದ್ದಾಗ ಒತ್ತಡಕ್ಕೆ ಒಳಗಾಗುತ್ತಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...